About the Author

1950ನೇ ಇಸವಿಯಲ್ಲಿ ಸೋಮವಾರ ಪೇಟೆಯಲ್ಲಿಜನಿಸಿದರು.ಇವರ ತಂದೆ ಬಾಲಕೃಷ್ಣ ,ತಾಯಿ ನೀಲಮ್ಮ. ಪೋಷಕರು ಅಧ್ಯಾಪಕರಾಗಿ ಕೊಡಗಿನ ಎಲ್ಲಾ ಕಡೆ ಕೆಲಸ ಮಾಡುತ್ತಿದ್ದರಿಂದ ,ಡಾಕ್ಟರ್ ಸೂರ್ಯ ಕುಮಾರ್ ಅವರು ಬಾಲ್ಯವನ್ನು ಭಾಗಮಂಡಲ, ಸಂಪಾಜೆ , ಮಡಿಕೇರಿಯ ಸರಕಾರಿ ಪ್ರೌಢಶಾಲೆಯಲ್ಲಿ, ( ಕನ್ನಡ ಮಾಧ್ಯಮದಲ್ಲಿ), ಪಿ ಯು ಸಿ ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ನಂತರ ಎಂ .ಬಿ. ಬಿ.ಎಸ್ ಮೈಸೂರಿನ ಸರಕಾರಿ ಕಾಲೇಜಿನಲ್ಲಿ. ಬೆಂಗಳೂರಿನ ಸರಕಾರೀ ವೈದ್ಯಕೀಯ ಕಾಲೇಜನಲ್ಲಿ ವಿಧಿ ವಿಜ್ಞಾನ ವಿಷಯ ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವೀರ ರಾಜಪೇಟೆ, ಸಂಪಾಜೆ ,ಬೆಂಗಳೂರು, ಮತ್ತು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಇವರ ವೈದ್ಯಕೀಯ ಜೀವನ ನಡೆದಿದೆ.. ಮಡಿಕೇರಿಯಲ್ಲಿ ಸುಮಾರು 18 ವರ್ಷ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಭಾಗದಲ್ಲಿ ಮತ್ತು ವಿಧಿವಿಜ್ಞಾನ ಪರಿಣಿತರಾಗಿ ಕೆಲಸ ಮಾಡಿರುತ್ತಾರೆ.. 1990 ರ ದಶಕದಲ್ಲಿ ವೈದ್ಯಕೀಯ ಕಾಲೇಜು ಹೊರತುಪಡಿಸಿ,, ಇಡೀ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಇದ್ದ, ಏಕೈಕ ವಿಧಿವಿಜ್ಞಾನ ಪರಿಣಿತರು ಇವರು. ಕೊನೆಗೆ ಸ್ವಯಂ ನಿವೃತ್ತಿ ಹೊಂದುವ ಸಮಯದಲ್ಲಿ ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕರು ಆಗಿ ಕೆಲವು ದಿನ ಇದ್ದವರು. ಕೊಡಗು ಸರಕಾರೀ ವೈದ್ಯರ ಸಂಘದ ಅಧ್ಯಕ್ಷ ಕೂಡಾ ಆಗಿದ್ದರು. ಇವರು ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ್ದರು, ಆ ಸಮಯದಲ್ಲಿ ಬಳಗ ಕೊಡಗಿನ ಮೂಲೆಮೂಲೆಗಳಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು...ಕೊಡಗಿನಲ್ಲಿ ನಡೆದ ಪ್ರಥಮ ಕೊಡಗು ಉತ್ಸವದಲ್ಲಿ ಲೇಖಕರ ಬಳಗ ,ಜಿಲ್ಲೆಯ ಆಡಳಿತದೊಂದಿಗಿನ, ಸಹ ಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಿ, ಭಾಗವಹಿಸಿ ,ಜನರ ಮೆಚ್ಚುಗೆ ಗಳಿಸಿತ್ತು. ಇವರು ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡಂತಹ ಅನೇಕ ವಿಶೇಷ ಪ್ರಕರಣಗಳನ್ನು,ವಿಷಯಗಳನ್ನು ಕನ್ನಡದ ಕಥೆಗಳ ಮೂಲಕ ಅನೇಕ ನಿಯತ ಖಾಲಿಕ ಮತ್ತು ವಾರಪತ್ರಿಕೆಗಳಲ್ಲಿ ಬರೆಯುತ್ತಿದ್ದರು . ಮಡಿಕೇರಿಯ ಆಕಾಶವಾಣಿಯಲ್ಲಿ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮಗಳಲ್ಲಿ ಇವರು ಬಹಳ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಸದ್ಯ ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ. ಸೂರ್ಯ ಕುಮಾರ್, ಪ್ರಸ್ತುತ ಮಡಿಕೇರಿಯಲ್ಲಿ ವಾಸ ಮಾಡುತ್ತಿದ್ದಾರೆ.

ಕೃತಿಗಳು: ವೈದ್ಯ ಕಂಡ ವಿಸ್ಮಯ

ಕೆ.ಬಿ ಸೂರ್ಯ ಕುಮಾರ್