About the Author

ಕೆ. ಜಿ. ನಾಗರಾಜಪ್ಪ ಅವರು ಜನಿಸಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಕಲ್ಲೂರಿನಲ್ಲಿ 1934ರ ಜನೆವರಿ 9ರಂದು. ಕಲ್ಲೂರು, ಕಡಬ, ತುಮಕೂರು, ಮೈಸೂರುಗಳಲ್ಲಿ ವಿದ್ಯಾಭ್ಯಾಸ, ಸಾಗರ, ಮೈಸೂರು, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆ. ದೊಡ್ಡಸಂಕಣ್ಣ (ಐತಿಹಾಸಿಕ ಕಾದಂಬರಿ-1962), ದೇವಾಂಗ ಸಂಸ್ಕೃತಿ (ಅಧ್ಯಯನ-1983), ಮರುಚಿಂತನೆ (ವಿಮರ್ಶೆ-1985), ಇಕ್ಕಟ್ಟು ಬಿಕ್ಕಟ್ಟು (ವಿಮರ್ಶೆ-1998) ಪ್ರಕಟಿತ ಕೃತಿಗಳು. ಅನ್ವೇಷಕ (1998) ಅಭಿನಂದನಾ ಕೃತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಬೆಂಗಳೂರಿನಲ್ಲಿ ತಮ್ಮ ಪತ್ನಿಯೊಂದಿಗೆ ನೆಲೆಸಿದ್ದಾರೆ. ವೈಚಾರಿಕ ಮತ್ತು ವಿಶ್ಲೇಷಣಾತ್ಮಕವಾಗಿ ಸಂಸ್ಕೃತಿ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನುಶ್ರೇಣಿ -ಯಜಮಾನಿಕೆ ಕೃತಿಗೆ 2018 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ಕೆ. ಜಿ. ನಾಗರಾಜಪ್ಪ

(09 Jan 1934)

Awards