About the Author

ಕೆ. ನರಸಿಂಹಮೂರ್ತಿ (ಜನನ: 12-05-1919) ಕೋಲಾರ ಜಿಲ್ಲೆಯ ಗೌರಿಬಿದನೂರಿನ ಬಳಿಯ ಮಂಚೇನಹಳ್ಳಿಯವರು. ತಂದೆ ಕೃಷ್ಣಮೂರ್ತಿ, ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿ. ಸಂಸ್ಕೃತ ಪಂಡಿತ ಸೀತಾರಾಮ ಶಾಸ್ತ್ರಿಗಳಿಂದ ಸಾಹಿತ್ಯಾಸಕ್ತಿ. ಕಾಲೇಜಿನಲ್ಲಿ ಓದುತ್ತಿದ್ದಾಗ ಬರೆದ ಕಥೆ ‘ಬೆಳೆದಲ್ಲೇ ಉಳಿದಿದ್ದರೆ’ ಕೃತಿಗೆ ಬಹುಮಾನ. ಸಾಹಿತ್ಯ ಪರಿಷತ್ತು ನಡೆಸಿದ ವಿಮರ್ಶಾ ಸ್ಪರ್ಧೆಯಲ್ಲಿ ‘ಕನ್ನಡದ ಸಣ್ಣ ಕಥಾ ಸ್ವರೂಪ’ ಲೇಖನಕ್ಕೆ ದ್ವಿತೀಯ ಬಹುಮಾನ ಲಭಿಸಿತ್ತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್‌) ಪದವಿ, ಅದೇ ಕಾಲೇಜಿನಲ್ಲಿ ಅಧ್ಯಾಪಕರಾದರು. 1943 ರಲ್ಲಿ ಇಂಗ್ಲಿಷ ಎಂ.ಎ. ಪದವೀಧರರು. 1956 ರಲ್ಲಿ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ, ಅಶೋಕ ವಿಜಯ (ಖಂಡಕಾವ್ಯ) ಪ್ರಿಯದರ್ಶಿನಿ ಮತ್ತು ಇತರ ಕಥೆಗಳು, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಕಟಿಸಿರುವ ಆಧುನಿಕ ಭಾರತೀಯ ಸಾಹಿತ್ಯ ಕನ್ನಡ ಭಾಷೆಯ ಸಂಪಾದಕತ್ವ, ರಾಜ್ಯ ಸಾಹಿತ್ಯ ಅಕಾಡಮಿಯ ಚಂದನ, ಅನಿಕೇತನ ಪತ್ರಿಕೆ ಸಂಪಾದಕರು. ದೇವುಡು ನರಸಿಂಹಶಾಸ್ತ್ರಿಗಳ ಕೃತಿಸಮೀಕ್ಷೆ,. ಆಡಳಿತಗಾರನ ಡೈರಿಯಿಂದ, ವಿಮರ್ಶಾಗ್ರಂಥಗಳು ರಚಿಸಿದ್ದು. ಕನ್ನಡ ಪ್ರಭ  ‘ಸಾಹಿತ್ಯಲೋಕ’ ಅಂಕಣಕಾರರಾಗಿದ್ದರು. ಇವರು 12-06-1999 ರಂದು ನಿಧನರಾದರು. 

ಕೆ. ನರಸಿಂಹಮೂರ್ತಿ

(12 May 1919-12 Jun 1999)