About the Author

ಆಯುರ್ವೇದ ವೈದ್ಯರು ಮತ್ತು ವೈದ್ಯ ಸಾಹಿತಿಯೂ ಆಗಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಆಯುರ್ವೇದವನ್ನು ಪ್ರಚುರ ಪಡಿಸಬೇಕು ಹಾಗೂ ಸರಳವಾಗಿ ಈ ಬಗ್ಗೆ ಕನ್ನಡದಲ್ಲಿ ಜನರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈವರೆಗೆ ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯ ಟೈಮ್ಸ್‌, ತರಂಗ, ಪ್ರಿಯಾಂಕ, ಗೃಹಶೋಭಾ ಸೇರಿದಂತೆ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಬರೆದ ಲೇಖನಗಳ ಸಂಖ್ಯೆ 300ನ್ನೂ ಮೀರುತ್ತದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದಲ್ಲಿ ‘ಆವಿ ಆಯುರ್ವೇದಿಕ್ ಹೆಲ್ತ್ ಹೋಮ್’ ಎನ್ನುವ ಆಯುರ್ವೇದಿಕ್ ಕ್ಲಿನಿಕ್‌ನ್ನು ನಡೆಸುತ್ತಿರುವ ಇವರು ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸೇರಿದಂತೆ ಹಲವು ಸಮಾಜ ಸೇವಾ ಸಂಸ್ಥೆಗಳ ಮೂಲಕವೂ ಆಯುರ್ವೇದ ವೈದ್ಯ ಪದ್ಧತಿಯನ್ನು ಪ್ರಚುರ ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ಉಚಿತ ಆಯುರ್ವೇದಿಕ್ ಶಿಬಿರಗಳನ್ನು ನಡೆಸಿರುವ ಇವರು ಈಗಾಗಲೇ ‘ರೋಗ ನಿವಾರಣೆಗೆ ಮನೆಮದ್ದು’, ‘ಸರ್ವರೋಗಕ್ಕೆ ಸುಲಭ ಚಿಕಿತ್ಸೆ’, ‘ಆಯುರಾರೋಗ್ಯಕ್ಕೆ ಆಯುರ್ವೇದ’, ‘ಉತ್ತಮ ಆರೋಗ್ಯಕ್ಕೆ ಆಯುರ್ವೇದದ ಮೂಲಮಂತ್ರಗಳು’, ‘ಅಂದದ ಆರೋಗ್ಯಕ್ಕೆ ಆಪ್ತವೈದ್ಯ’ ಎನ್ನುವ ಆಯುರ್ವೇದ ವೈದ್ಯ ಪದ್ಧತಿ ಕುರಿತಾದ ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಇವುಗಳು ಈಗಾಗಲೇ ಹಲವಾರು ಮುದ್ರಣಗಳನ್ನು ಕಂಡಿದೆ. ಇದರೊಂದಿಗೆ ನಮ್ಮ ಜೀವನಶೈಲಿಗೆ ಮಾರ್ಗದರ್ಶನ ನೀಡಬಲ್ಲಂತಹ ‘ಹೆಲ್ತಿ ಲೈಫ್ ಸ್ಟೈಲ್ ಎಂದರೇನು?’ ಎನ್ನುವ ಪುಸ್ತಕವನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಪಯುಕ್ತವಾದಂತಹ ‘ಒನ್ ಲೈನ್ ನಾಲೆಡ್ಜ್’ ಎನ್ನುವ ಪುಸ್ತಕವನ್ನೂ ಬರೆದಿದ್ದಾರೆ. ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಆಯುರ್ವೇದದ ಬಗ್ಗೆ ಕಾರ್ಯಕ್ರಮವನ್ನು ಕೂಡಾ ನಡೆಸಿಕೊಟ್ಟಿದ್ದಾರೆ.

ಕೆ. ಪೂರ್ಣಿಮಾ ಕೋಡೂರು