About the Author

ಡಾ. ಕೆ. ರಘುನಾಥ್ ಅವರು ಮುಂಬೈನ ಝುನ್ ಝುನ್ ವಾಲಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಮರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಬೆಂಗಳೂರು ವಿ.ವಿ.ಯಿಂದ ಎಂ.ಎ. ಪದವಿ ಹಾಗೂ ಮುಂಬೈ ವಿ.ವಿ.ಯಿಂದ ಎಂಫಿಲ್, ಪಿಎಚ್‌ಡಿ ಪಡೆದ ಅವರು ಮುಂಬೈಯಲ್ಲಿ ಕನ್ನಡವನ್ನು ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ಕಲ್ಯಾಣ ಕನ್ನಡ ಸಾಹಿತ್ಯ ಕೇಂದ್ರ, ಮುಂಬೆಳಕು ಕನ್ನಡ ಬಳಗದ ಸ್ಥಾಪಕರಾದ ಡಾ. ರಘುನಾಥ್ ಒಳ್ಳೆಯ ವಿಮರ್ಶಕರೂ ಆಗಿದ್ದಾರೆ. 'ಅರವಿಂದ ನಾಡಕರ್ಣಿ ಅವರ ಕಾವ್ಯ - ಒಂದು ಅಧ್ಯಯನ' ಅವರ ಎಂಫಿಲ್ ಪ್ರಬಂಧ. 'ಕನ್ನಡ ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ' ಅವರ ಸಂಶೋಧನ ಮಹಾಪ್ರಬಂಧ. ಮಹಾರಾಷ್ಟ್ರ ಸರಕಾರದ ಮಾಧ್ಯಮಿಕ ಹಾಗೂ ಉಚ್ಚ ಮಾಧ್ಯಮಿಕ ಶಿಕ್ಷಣ ಮಂಡಳಿ ಪುಣೆ ಇಲ್ಲಿ ಪಠ್ಯಪುಸ್ತಕ ಮಂಡಳದ ಸಂಪಾದಕರಾಗಿ, ಮುಂಬಯಿ ವಿಶ್ವವಿದ್ಯಾಲಯದ,ಕನ್ನಡ ಅಭ್ಯಾಸ ಮಂಡಳಿಯ ಸದಸ್ಯರಾಗಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಎಂಫಿಲ್ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೇರ ನಡೆ ನುಡಿಗೆ ಹೆಸರಾಗಿರುವ ಡಾ. ರಘುನಾಥ ಸೃಜನಶೀಲ ವಿಮರ್ಶಕರು, ಕನ್ನಡ ಸಾಹಿತ್ಯ ಪರಿಷತ್ತು, ಅವರ ವಿಮರ್ಶಾ ಕೃತಿಯನ್ನು ಇತ್ತೀಚೆಗೆ ಬೆಳಕಿಗೆ ತಂದಿದೆ. ಅವರು ರಾಷ್ಟ್ರಮಟ್ಟದ ಅನೇಕ ಸಮ್ಮೇಳನಗಳಲ್ಲಿ ವಿದ್ವತ್‌ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. 'ಅವಲೋಕನ' ಮತ್ತು 'ಕನ್ನಡದ ಕನ್ನಡಿಯಲ್ಲಿ’ ಪ್ರಕಟಿತ ಕೃತಿಗಳು.

ಸದ್ಯ, ಭಾರತ ಸರ್ಕಾರ ಸಂಸ್ಕೃತಿ ಇಲಾಖೆಯ ಹಿರಿಯ ಶಿಷ್ಯವೇತನ ಯೋಜನೆ " ಮುಂಬಯಿ ಕನ್ನಡ ಕಾವ್ಯ " ಪೂರೈಸಿ ಸಂಪ್ರಬಂಧವನ್ನು ಇಲಾಖೆಗೆ ಸಲ್ಲಿಸಿದ್ದಾರೆ. ಭಾರತ ಸರ್ಕಾರದ ಮಾನವ ಸಂಪನ್ಮೂಲ ವಿಭಾಗ, ಸಂಸ್ಕೃತಿ ಸಚಿವಾಲಯ ನೀಡುವ ಹಿರಿಯ ಶಿಷ್ಯವೇತನದ ಅಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. 

ಕೆ. ರಘುನಾಥ್