About the Author

ಲೇಖಕ ಕೆ.ವಿ. ಮುದ್ದವೀರಪ್ಪಅವರು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜಂಗಮರಹಳ್ಳಿ ಗ್ರಾಮದವರು. ತಂದೆ ಎನ್. ವೀರಣ್ಣ, ತಾಯಿ ತಿಮ್ಮಕ್ಕ. ಇವರ ಶಿಕ್ಷಣ ಜ೦ಗಮನಹಳ್ಳಿ, ಹೊಸಹಳ್ಳಿ, ಸಿರಾ ಮತ್ತು ಬೆಂಗಳೂರಿನಲ್ಲಿ ನಡೆಯಿತು. ಕನ್ನಡ ಎಂ.ಎ, ಪದವೀಧರರು. ಜೂನಿಯರ್ ರೀಸರ್ಚ್ ಫೆಲೋಶಿಪ್ ಪಡೆದು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕನ್ನಡ ಸಾಹಿತ್ಯಾಧ್ಯಯನ ವಿಭಾಗದಲ್ಲಿ  'ತುಮಕೂರು ಜಿಲ್ಲೆಯ ಕೋಟೆಕೊತ್ತಲಗಳ ಜಾನಪದೀಯ ಅಧ್ಯಯನ' ವಿಷಯ ಕುರಿತು (2004) ಪಿಎಚ್.ಡಿ. ಪದವಿ ಪಡೆದಿದ್ದಾರೆ.

ಕೃತಿಗಳು; ತುಮಕೂರು ಜಿಲ್ಲೆಯ ಕೋಟೆಗಳ ಸಾಂಸ್ಕೃತಿಕ ಒಳನೋಟಗಳು, ಸಂಕರ ಸಂಸ್ಕೃತಿ, ಜಾನಪದ ಕೃತಿ ಸಮೀಕ್ಷೆ, ಬಿಸಿಲದನಿ, ಶಿಕ್ಷಣತಜ್ಞ ಡಾ. ವೂಡೇ ಪಿ. ಕೃಷ್ಣ, ನೇರ, ದಿಟ್ಟ ರಾಜಕಾರಣಿ ಸಿ.ಜೆ. ಮುಕ್ಕಣ್ಣಪ್ಪ, ಸ್ನೇಹಜೀವಿ ಹೆಚ್.ಆರ್. ದಾಸೇಗೌಡ, 'ಕಂಡಷ್ಟೂ ಬಿಸಿಲೆ.(ವಿಮರ್ಶಾ ಕೃತಿಗಳು), ವೀರನಾಗಪ್ಪನ ಪದ, ವೀರಬೊಮ್ಮನಹಳ್ಳಿ ದಿಬ್ಬದ ವೀರಬೊಮ್ಮಣ್ಣನ ಕಾವ್ಯ, ಮಹಾಸತಿ ಬರಗೂರು ಈರಮ್ಯನ ಕಾವ್ಯ, ಜಾನಪದ ವರ್ಷ-2012, ಬೆಜ್ಜಿಹಳ್ಳಿ ಜಲಧಿ ಬೊಪ್ಪರಾಯನ ಕಾವ್ಯ (ಜನಪದಕಾವ್ಯ ಸಂಗ್ರಹ ), ರತ್ನಗಿರಿ, ರಾಯದುರ್ಗ-ನುಂಕೆಮಲೆ, ಕೃಷ್ಣಸಿರಿ, ನೆಲಗಡಲೆ, ನುಡಿ ಕನ್ನಡಿ, ಸಾರ್ಥಕಜೀವಿ, ಅಭಿಜ್ಞಾನ (ಸಂಪಾದನೆ).

ಪ್ರಶಸ್ತಿ-ಪುರಸ್ಕಾರಗಳು:  2011ನೇ ಸಾಲಿನ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಪ್ರಶಸ್ತಿ, ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2017, ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ.

ಕೆ.ವಿ. ಮುದ್ದವೀರಪ್ಪ

(26 May 1974)