About the Author

ಕಾ.ವಾ. ಆಚಾರ್ಯ ಶಿರ್ವ ಇವರು ಉಡುಪಿ ತಾಲ್ಲೂಕಿನ ಶಿರ್ವದ ಹಿಂದೂ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸುಮಾರು ನಲ್ಪತು ವರ್ಷ ಚಿತ್ರಕಲಾಧ್ಯಾಪಕರಾಗಿದ್ದು, ಕಾಲೇಜಿನ ಸರ್ವಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆಗಳ ನೇತೃತ್ವವನ್ನು ವಹಿಸಿಕೊಂಡಿದ್ದವರು.

ಇವರ ಹುಟ್ಟೂರು ಕಾಸರಗೋಡು, ತೀರ್ಥರೂಪರು ಶಿಲ್ಪಿವಾಸ್ತುಶಿಲ್ಪಿ ಅಪ್ಪಣ್ಣಾಚಾರ್ಯರು, ಮಾತೃಶ್ರೀ ಜನಪದ ಹಾಡುಗಾರ್ತಿ ಶ್ರೀಮತಿ ಲಕ್ಷ್ಮಿ ಕಾಸರಗೋಡು ಬೋರ್ಡ್ ಹೈಸ್ಕೂಲಲ್ಲಿ ಶಿಕ್ಷಣ ಪಡೆದವರು. ಕಲಾವಿದ, ಕಲಾಗುರು ಕೆ.ವಿ. ನೋಂಡರು ಇವರ ಗುರುಗಳು, ವಿವಿಧ ಮಾಧ್ಯಮಗಳಲ್ಲಿ ತರಬೇತಿ ನೀಡಿದ ಹಿರಿಯ ಚೇತನ.

'ಕಾ.ವಾ.' ಇವರು ನಿವೃತ್ತರಾದಾಗ ಸಾರ್ವಜನಿಕರು, ಹಳೆ ವಿದ್ಯಾರ್ಥಿಗಳು (ಹಗಲು-ರಾತ್ರಿ) ಇಡೀ ಒಂದು ದಿನದ ಅದ್ದೂರಿ ಕಾರ್ಯಕ್ರಮದೊಂದಿಗೆ ಒಂದು ಲಕ್ಷಕ್ಕಿಂತಲೂ ಅಧಿಕ ನಿಧಿ ಸಮರ್ಪಿಸಿ ಸನ್ಮಾನಿಸಿದರು. ಆ ನಿಧಿಯನ್ನು ಕಾ.ವಾ. ಆಚಾರ್ಯ ವಿದ್ಯಾರ್ಥಿ ಟ್ರಸ್ಟ'ನ್ನಾಗಿ ಮಾಡಿ, ಮಕ್ಕಳಿಗೆ ಚಿತ್ರ-ಶಿಲ್ಪ ಶಿಬಿರ, ಸೃಜನಶೀಲ ಚಿತ್ರಕಲಾ ಶಿಕ್ಷಕರಿಗೆ 'ಕಲಾನಿಧಿ ಪ್ರಶಸ್ತಿ, ನಿಧಿಯೊಂದಿಗೆ ಸನ್ಮಾನದ ವ್ಯವಸ್ಥೆ ಮಾಡಿದವರು.

ಇವರು ಲೇಖಕರು, ಚಿತ್ರಗಾರರು, ಹಾಡುಗಾರರು, ನಾಟಕಕಾರರು-ನಿರ್ದೆಶಕರು, ಕನ್ನಡ, ಇಂಗ್ಲಿಷ್, ಹಿಂದಿಗಳಲ್ಲದೆ, ಮಲಯಾಳ, ತಮಿಳು ಸಾಹಿತ್ಯ ಅಧ್ಯಯನ ಪ್ರೇಮಿ.

ಕಾ.ವಾ. ಆಚಾರ್ಯ ಶಿರ್ವ