About the Author

ಕಾಶಿ ವಿಶ್ವನಾಥ ಶೆಟ್ಟಿ ಅವರು ತುಮಕೂರಿನಲ್ಲಿ 1928 ಫೆಬ್ರುವರಿ 24ರಂದು ಜನಿಸಿದರು. ತಂದೆ ಕೃಷ್ಣ ಶೆಟ್ಟಿ, ತಾಯಿ ಸೀತಾಲಕ್ಷ್ಮಮ್ಮ. ಮೈಸೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಚಿಕ್ಕಮಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 

ಇವರು ಬರೆದ ಪ್ರಮುಖ ಕೃತಿಗಳೆಂದರೆ ಸೀತಕ್ಕನ ಸವತಿ, ಕಾಶಿಕಾವೇರಿ, ಮಾವುಮಲ್ಲಿಗೆ, ಸಮಾಗಮ, ಸ್ವಾಮಿ ಶಿವಾನಂದ, ಸರಸ್ವತಿ, ಸೋದರಿ ನಿವೇದಿತೆ, ಗೃಹದೇವತೆ, ಬ್ರಹ್ಮಗಂಟು, ಧರ್ಮನಂದನ, ಉತ್ತಿಷ್ಠ ಭಾರತ, ಬುದ್ಧ ಚರಿತ ಮಹಾಮಧು- ಬೃಹತ್ ಕಾವ್ಯ ಮುಂತಾದವು.

ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿದ್ದ ಇವರು ಚಿಕ್ಕಮಗಳೂರಿನ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಇವರಿಗೆ  ಮಹಾರಾಜ ಸ್ಕೌಟ್ ಪ್ರಶಸ್ತಿ ಸಂದಿದೆ. 1990 ಆಗಸ್ಟ್‌ 20ರಂದು ಮರಣ ಹೊಂದಿದರು.

ಕಾಶಿ ವಿಶ್ವನಾಥ ಶೆಟ್ಟಿ

(24 Feb 1928-20 Aug 1990)

Books by Author