About the Author

ತುಳು ಸಾಹಿತ್ಯದ ಹೆಸರಾಂತ ಕವಿ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಪುತ್ತೂರು ತಾಲ್ಲೂಕಿನ ಕೆದಂಬಾಡಿಯಲ್ಲಿನ 1916ರಲ್ಲಿ  ಜನಿಸಿದರು. ತುಳು ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಪಾರ ಸೇವೆ ಸಲ್ಲಿಸಿದವರು.
ತುಳುತ್ತ ಪೋರ್ಲು ಅಜ್ಜಬಿರು (ನಾಟಕಗಳು), ಕುಜಿಲೆ ಪೂಜೆ (ಮೂಲ ಡಿ. ವಿ. ಜಿ. ಕನ್ನಡೊಗು ಕಣತ್ತಿನ ಉಮರ್ ಖಯ್ಯಾಮನ ರುಬಾಯತ್) ಅಸೆನಿಯಾಗೊ ಕಾಂತಗ ಜೋಗಿ (ಮೂಲ ಆಂಗ್ಲ ಕವಿ ಬ್ರೌನಿಂಗ್‌ನನ ದಿ ಪೈಪರ್ ಬೊಕ್ಕ ಕುವೆಂಪು ಅವರ ಕಿಂದರ ಜೋಗಿ). ಕೃಷಿಕರಾಗಿ, ಕೃಷಿಯ ರಕ್ಷಣೆಗಾಗಿ ಅನಿವಾರ್ಯವಾಗಿ ಬೇಟೆಗಾರರಾಗಿ, ತಮ್ಮ ಅರುವತ್ತನೆಯ ವಯೋಮಾನದಲ್ಲಿ ಅದೇ ಬೇಟೆಯ ನೆನಪುಗಳನ್ನು ಅಕ್ಷರಕ್ಕೆ ಇಳಿಸಿ ದಿಢೀರಾಗಿ ಪ್ರಸಿದ್ದಿಗೆ ಬಂದವರು ಜತ್ತಪ್ಪ ರೈ ಅವರು. ಮಹಾಕವಿ ಕುವೆಂಪು ಮೊದಲಾದವರಿಂದಲೇ ಬೇಟೆ ಯ ಸಾಹಿತ್ಯಕ್ಕಾಗಿ ಪ್ರಶಂಸೆಗೆ ಒಳಗಾದ ಅವರು ಬನ್ನಂಜೆಯವರಿಂದ ’ಮೃಗಯಾ ಸಾಹಿತಿ’ ಎಂದೂ ಕರೆಸಿಕೊಂಡಿದ್ದರು.
 ಬೇಟೆಯ ನೆನಪುಗಳು, ಈಡೊಂದು ಹುಲಿಯೆರಡು ಬೇಟೆಯ ಉರುಳು ಬೆಟ್ಟದ ತಪ್ಪಲಿಂದ ಕಡಲ ತಡಿಯವರೆಗೆ (ಪುಸ್ತಕಗಳು). ಈ ಪುಸ್ತಕಗಳು ಕೆದಂಬಾಡಿ ಜತ್ತಪ್ಪ ರೈ ಅವರಿಗೆ ತುಂಬಾ ಖ್ಯಾತಿಯನ್ನು ತಂದಿವೆ. ಬೇಟೆಯ ನೆನಪುಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭ್ಯವಾಗಿದೆ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ, ಪ್ರಶಸ್ತಿ ಗೌರವ ಪಡೆದ ಕೆದಂಬಾಡಿ ಜತ್ತಪ್ಪ ರೈಗಳು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು.  ರೈ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 1994-95 ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ತುಳು, ಕನ್ನಡ, ಸಂಸ್ಕೃತ ಭಾಷೆಗಳಲ್ಲೂ ಅಪೂರ್ವ ಪಾಂಡಿತ್ಯ ಹೊಂದಿದದ್ದರು. ಈ ಕಾರಣಕ್ಕೆ ಅವರು ಸಂಸ್ಕೃತ ಮತ್ತು ಕನ್ನಡದಿಂದ ತುಳುವಿಗೆ ಇನ್ನಿಲ್ಲದಷ್ಟು ಸೊಗಸಾಗಿ ಅನುವಾದಿಸಿದ ಹೆಗ್ಗಳಿಕೆಗೂ ಪಾತ್ರರಾದರು. ದಕ್ಷಿಣ ಕನ್ನಡದ ಪ್ರತೂರು ಸಮೀಪದ ಪಾಣಾಜೆಯಲ್ಲಿ 1916ರ ಫೆಬ್ರುವರಿ 11ರಂದು ಜನಿಸಿದ ಅವರು ಅದಮ್ಯ ಜೀವನೋತ್ಸಾಹದಿಂದ ಎಳೆಯರಿಗೆ ಮತ್ತು ಗೆಳೆಯರಿಗೆ ಮಾದರಿಯಾಗಿ ಬದುಕಿದ್ದರು. 2003ರ ಜೂನ್‌ 20ರಂದು ಕಾಲವಶರಾದರು.

ಕೆದಂಬಾಡಿ ಜತ್ತಪ್ಪ ರೈ

(11 Feb 1916-20 Jun 2003)