About the Author

ಅಕ್ಯಾಡೆಮಿಕ್ ವಲಯದಲ್ಲಿ ಡಾ.ಸಿ.ಎಸ್.ಶಿವಕುಮಾರಸ್ವಾಮಿ ಎಷ್ಟು ಪ್ರಸಿದ್ದರೋ, ಕುಮಾರಚಲ್ಯ, ನಾನ್- ಅಕ್ಯಾಡೆಮಿಕ್ ವಲಯದಲ್ಲಿ ಅಷ್ಟೇ ಪ್ರಸಿದ್ಧರು. ನಿರರ್ಗಳವಾಗಿ ಹಳಗನ್ನಡ ಕಾವ್ಯವನ್ನು ಕುರಿತು ಅಧಿಕೃತವಾಗಿ ವ್ಯಾಖ್ಯಾನಿಸುವ ಕೆಲವೇ ಕೆಲವು ವಿದ್ವಾಂಸರ ಪೈಕಿ ಚಲ್ಯ ಸಹ ಒಬ್ಬರು. ಪ್ರತೀ ಮಾತಿನಲ್ಲೂ ಕೇಳುಗನನ್ನು ಪರವಶಗೊಳಿಸುವ ಛಾತಿ ಬೇರೆ. ಹಾಗೆಯೇ, ಎಜ್ಯುಕೇಟ್ ಮಾಡುವ ಹಂಬಲ ಕೂಡ. ವಿದ್ಯಾರ್ಥಿ ಸಮೂಹದಿಂದ ಚಲ್ಯಮೇಸ್ಟ್ರು ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಇವರು ಬರೆದಿರುವುದು, ಪ್ರಕಟಿಸಿರುವುದು ಕಡಿಮೆ ಎನಿಸಿದರೂ, ಅವೊಂದೊಂದು ಮೌಲಿಕ.

ಚಲ್ಯ ಎಂಬ ಪುಟ್ಟ ಹಳ್ಳಿಯ ಈ ಕುಮಾರಸ್ವಾಮಿಯವರ ಪ್ರಖರ ಬಂಡಾಯೀಕೃತ ಆಲೋಚನೆಗಳು ಪ್ರಪ್ರಥಮಬಾರಿಗೆ ಪ್ರಕಟಗೊಂಡದ್ದು ನವಾಬ ಎಂಬ ಗಮನಾರ್ಹ ಕವನ ಸಂಕಲನದ ಮೂಲಕ. ಸದರಿ ಸಂಕಲನದ ಒಂದೊಂದು ಕವಿತೆಯು ಒಡಲೊಳಗೆ ಸಾಮಾಜಿಕ ಸಮಾನತೆಯ ವಿರುದ್ಧ ಅಸಹನೆ, ಬದಲಾವಣೆ ಕುರಿತ ತುಡಿತ, ಸಹಜ ಅಭಿವ್ಯಕ್ತಿಯ ತಾಜಾತನವನ್ನು ಕಾಣಬಹುದು. ಒಂದೊಂದು ಅಪ್ಪಟ ಕವಿತೆಯೇ ಬರಲಿರುವ ಕವನ ಸಂಕಲನ ಗುಲಾಬಿ ಮತ್ತು ಪಾರಿವಾಳ ದ ಬಗ್ಗೆ ಕುತೂಹಲ ಮತ್ತು ಪ್ರೀತಿಯನ್ನಿಟ್ಟುಕೊಳ್ಳೋಣ 

ವಚನ ಸಾಹಿತ್ಯದೊಂದಿಗೆ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕೆಲವು ಕೃತಿಗಳನ್ನು ಬರೆದಿರುವ ಇವರು ಸಾಹಿತ್ಯಿಕವಾಗಿ ಸಾಮಾಜಿಕವಾಗಿ ಕ್ರಿಯಾಶೀಲತೆಯನ್ನು ಜೋಪಾನವಾಗಿ ಜತನದಿಂದ ಕಾಪಾಡಿಕೊಳ್ಳುತ್ತಲೇ ಮುಂದುವರೆದಿದ್ದಾರೆ. ನಾಡಿನುದ್ದಗಲಕ್ಕೂ ನಡೆಯುತ್ತಲೇ ಇರುವ ಸಮಾರಂಭಗಳಲ್ಲಿ ನಿರಂತರವಾಗಿ ಭಾಗವಹಿಸುತ್ತ. ಅಲ್ಲೆಲ್ಲ ವಿದ್ವತ್ ಪೂರ್ವ ಉಪನ್ಯಾಸಗಳನ್ನು ನೀಡುತ್ತಾ ಸಮಕಾಲೀನ ಸಾಹಿತ್ಯದ ರಾಯಭಾರಿಯೆನಿಸಿದ್ದಾರೆ.

ಕೃತಿಗಳು: ಸರಳ ಛಂದಸ್ಸು

ಕುಮಾರಚಲ್ಯ