About the Author

ಜಾನಪದ ತಜ್ಞ, ಲೇಖಕ ಕ್ಯಾತನಹಳ್ಳಿ ರಾಮಣ್ಣ(1942) ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು  ಕ್ಯಾತನಹಳ್ಳಿಯವರು. ತಂದೆ- ದಾಸೇಗೌಡ, ತಾಯಿ- ಮಾದಮ್ಮ. ಪ್ರಾಥಮಿಕ ಶಿಕ್ಷಣವನ್ನು ಕ್ಯಾತನಹಳ್ಳಿಯಲ್ಲಿ ಪಡೆದ ಅವರು ಪ್ರೌಢ ಶಿಕ್ಷಣ ಪಾಂಡವಪುರ ಹಾಗೂ ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿಯಾಗಿ ಬಿ.ಎ (1968) ಪದವಿ ಪಡೆದರು. ಮೈಸೂರು ಮಾನಸಗಂಗೋತ್ರಿಯಿಂದ ಕನ್ನಡ ಅಧ್ಯಯನ ಸಂಸ್ಥೆಯಿಂದ ಎಂ.ಎ(1971) ಪದವಿ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಬೋಧಕರಾಗಿ, ಸಂಶೋಧನ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.

ಜಾನಪದ ವಿಹಾರ(ಸಂಪುಟ 1 1977), ಗೊಂದಲಿಗರು: ಒಂದು ಅಧ್ಯಯನ 1982 (ಅಕಾಡೆಮಿ ಬಹುಮಾನ ಪಡೆದಿದೆ), ಜಾನಪದ ವಿಹಾರ(ಸಂಪುಟ 2) 1985, ಕೊಂತಿಪೂಜೆ : ಒಂದು ಅಧ್ಯಯನ 1985, ಜನಪದ ನಿಘಂಟು 1987 (ಅಕಾಡೆಮಿ ಬಹುಮಾನ ಪಡೆದಿದೆ), ಕ್ಷೇತ್ರಕಾರ್ಯದ ಹಾದಿಯಲ್ಲಿ 1997, 2006, 2012 (ಅಕಾಡೆಮಿ ಬಹುಮಾನ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮ್ಮ ಗಿರಿಗೌಡರ ರುದ್ರಪ್ಪ ದತ್ತಿ ಬಹುಮಾನ ಪಡೆದಿದೆ), ಜಾನಪದ ವಿಹಾರ (ಸಂಶೋಧನೆಗಳ ಸಮಗ್ರ ಸಂಪುಟ) 2010, ಜಾನ್ ಫೆಯ್ತ್‍ಫುಲ್ ಫ್ಲೀಟ್: ವ್ಯಕ್ತಿ ಮತ್ತು ಸಾಧನೆ 2014 (ಜಾನಪದ ಸಂಶೋಧನೆಗಳು).

ಐದು ಜನಪದ ಕಥನ ಗೀತೆಗಳು 1970, ಗೊಂದಲಿಗರ ಕಥೆಗಳು(ಬಿಜಾಪುರ ಜಿಲ್ಲೆ) 1972, ಫ್ಲೀಟರು ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು 1972,  ಶಿವಮೊಗ್ಗ ಜಿಲ್ಲೆಯ ಗೊಂದಲಿಗರ ಕಥೆಗಳು 1975, ಬೀದರ ಜಿಲ್ಲೆಯ ಜನಪದ ಗೀತೆಗಳು 1976, ಬೀದರ ಜಿಲ್ಲೆಯ ಜನಪದ ಕಥೆಗಳು 1976, ಭೀಮವಿಲಾಸ(ಗುಲ್ಬರ್ಗ ಜಿಲ್ಲೆಯ ದೊಡ್ಡಾಟ) 1978, ಬಿಜಾಪುರ ಜಿಲ್ಲೆಯ ಲಾವಣಿಗಳು 1976, ಕಬ್ಬಾಳು ಕುಳಿಯಲ್ಲಿ ಹುಲಿ 1980 (ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನಪದ ಕಥೆಗಳು), ಸುಬ್ಬಕ್ಕ ಹಾಡಿದ ನಂಜುಂಡೇಶ್ವರ ಕಾವ್ಯ 198, ಫ್ಲೀಟರು ಸಂಗ್ರಹಿಸಿದ ಸಮಗ್ರ ಲಾವಣಿಗಳು 1991, 2012, ಕನಸಿನಲ್ಲಿ ಕಂಡ ಕಲ್ಪವೃಕ್ಷ 2004(ಕಾದಂಬರಿ ರೂಪದ ಜನಪದ ರಮ್ಯಕತೆ), ಕಲ್ಲಚ್ಚಿನ ಗಾದೆಗಳು(ಇತರರೊಡನೆ) 2001, 2011 (ಜಾನಪದ ಸಂಗ್ರಹ - ಸಂಶೋಧನೆಗಳು)
ಅರುವತ್ತಕ್ಕೆ ಅರುಳೋ ಮರುಳೋ 1981, ಅಡವಿಯಲ್ಲಿ ದೊರೆಯ ಮಕ್ಕಳು 1982, ಹಲಗಲಿಯ ಬೇಡರು 1988, 1991, 2009, ಕೋಲು ಬೇಕು ಕೋಲು (ನಾಟಕಗಳು),  ತಿಳಿಜಲ 1967, ವಜ್ರವರ್ತುಲ 1975, ಎಂದು ಬಂದೀತೋ ಮಳೆ 2000 (ಕಥಾ ಸಂಕಲನಗಳು), ಬದುಕು ಬಂಗಾರ 1972, ಭಗತ್‍ಸಿಂಗ್ 1976, ಹಲಗಲಿಯ ಶೂರರು 1978, ಜನಪದ ಸಾಹಸ ಕಥೆಗಳು 1980, ಜನಪದ ಹಾಸ್ಯ ಕಥೆಗಳು 1995, ಸಿದ್ದಪ್ಪಾಜಿ (ನವಸಾಕ್ಷರರಿಗಾಗಿ), ಅರ್ಚಕ ಬಿ.ರಂಗಸ್ವಾಮಿ, ಪ್ರೊ.ಡಿ.ಲಿಂಗಯ್ಯ, ಜಾನ್ ಫೆಯ್ತ್‍ಫುಲ್ ಫ್ಲೀಟ್ (ವ್ಯಕ್ತಿಚಿತ್ರಗಳು) ಪ್ರಕಟಿತ ಕೃತಿಗಳು.

 ಕ್ಯಾತನಹಳ್ಳಿ ರಾಮಣ್ಣ ಅವರಿಗೆ ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ(1991), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ `ಜಾನಪದ ತಜ್ಞ’(1998), ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ(2006) ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಪ್ರಥಮ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ(2015) ಸಂದಿವೆ. ಮೂರು ಸಲ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಮತ್ತು ಒಂದು ಸಲ ಸಾಹಿತ್ಯ ಅಕಾಡೆಮಿಯಿಂದ ಸೇರಿದಂತೆ ಅವರಿಗೆ ನಾಲ್ಕು ಸಲ ಅಕಾಡೆಮಿ ಬಹುಮಾನ ಬಂದಿದೆ.

ಕ್ಯಾತನಹಳ್ಳಿ ರಾಮಣ್ಣ