About the Author

ಎಲ್.ಪಿ.ಕುಲಕರ್ಣಿ. ಬಾಗಲಕೊಟೆ ಜಿಲ್ಲೆಯ ಹುನಗುಂದ ಇವರ ಹುಟ್ಟೂರು. ಖಾಯಂ ಆಗಿ ನೆಲೆಸಿದ್ದು ಬಾದಾಮಿಯಲ್ಲಿ. ಎಮ್.ಎಸ್.ಸಿ, ಬಿ.ಇಡಿ,(ಪಿ ಜಿ ಸಿ ಜೆ ಎಮ್ ಸಿ) ಪದವೀಧರರಾದ ಇವರು ಸರಕಾರಿ ಶಾಲೆಯಲ್ಲಿ ಗಣಿತ, ವಿಜ್ಞಾನ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ವಿಜ್ಞಾನ ಹಾಗೂ ಗಣಿತ ವಿಷಯಗಳ ಮೇಲಿನ ಆಸಕ್ತಿಯ ಕಾರಣ ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ, ಗಣಿತಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದಾರೆ.

ವಿಶ್ವವಾಣಿ ಪತ್ರಿಕೆಯಲ್ಲಿ ' ಟೆಕ್ ಸೈನ್ಸ್ ', ' ಸವಿಸವಿ ನೆನಪು, ಸಾವಿರ ನೆನಪು ', 'ದಿನಕ್ಕೊಂದು ಪ್ರಶ್ನೆ'. ಸಂಯುಕ್ತ ಕರ್ನಾಟಕ ಪತ್ರಿಕೆಯ ಕಿಂದರಿ ಜೋಗಿ ಪುರವಣಿಯಲ್ಲಿ ' ಯಕ್ಷ ಪ್ರಶ್ನೆ ' ದಿ ಡೈಲಿ ನ್ಯೂಸ್ ಪತ್ರಿಕೆಯಲ್ಲಿ 'ಇ-ಸೈನ್ಸ್ ಕಾರ್ನರ್','ಸೈನ್ಸ್ ಫ್ಯಾಕ್ಟ್' ಮುಂತಾದ ಅಂಕಣಗಳನ್ನು ಬರೆಯುತ್ತಿದ್ದಾರೆ. 2019-20 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಡೆಸಿದ ಎಚ್.ನರಸಿಂಹಯ್ಯನವರ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ಕೃತಿ ' ಯುರೇಕಾ- ವಿಜ್ಞಾನ‌ಲೋಕದ ಬೆಳಕಿಂಡಿ' ಕೃತಿಯಿಂದ ಆಯ್ದ ಲೇಖನವೊಂದು ಬೆಂಗಳೂರು ವಿಶ್ವವಿದ್ಯಾಲಯದ ಬಿಬಿಎ ಏವಿಯೇಷನ್ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. 

ಕೃತಿಗಳು: ಯುರೇಕಾ-ವಿಜ್ಞಾನ ಲೋಕದ ಬೆಳಕಿಂಡಿ, ಕ್ಯೂರಿಯಸ್, ವಿಜ್ಞಾನ ವೈಶಿಷ್ಟ್ಯ-ಕಿಣ್ವಗಳಿಂದ ಅಂತರತಾರ ವಸ್ತುಗಳವರೆಗೆ, ವಿಶಿಷ್ಟ ವಿಜ್ಞಾನಿಗಳ ವಿಭಿನ್ನ ಸಾಧನೆಗಳು-ವಿಜ್ಞಾನ ಪಥದ ವಿಶಿಷ್ಟ ಸಾಧಕರು.

ಎಲ್.ಪಿ.ಕುಲಕರ್ಣಿ