About the Author

ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರಗಳಲ್ಲಿ 60 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವ 78 ವರ್ಷ ವಯಸ್ಸಿನ ಎಲ್. ಎಸ್. ಶಾಸ್ತ್ರಿಯವರ ಜನ್ಮಭೂಮಿ ಉತ್ತರಕನ್ನಡ, ಕರ್ಮಭೂಮಿ ಬೆಳಗಾವಿ,. ಸುಮಾರು 110 ಕೃತಿಗಳು, 40 ಸಾವಿರಕ್ಕೂ ಹೆಚ್ಚು ಬಿಡಿ ಬರೆಹಗಳು, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿ ರಚನೆ 15ಕ್ಕೂ ಹೆಚ್ಚು ಸಾಹಿತ್ಯ ಕಲೆ ಪತ್ರಿಕಾ ಸಂಘಟನೆ; ಐದು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ಸಂಘಟನೆ ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ, ವಿಶಾಲ ಕರ್ನಾಟಕ, ಲೋಕದರ್ಶನ ಮೊದಲಾದ ಪತ್ರಿಕೆಗಳಲ್ಲಿ ಆರು ದಶಕಗಳ ಸೇವೆ; ಕರ್ನಾಟಕ ಪತ್ರಿಕಾ ಅಕಾಡೆಮಿ, ಕೆಯೂಡಬ್ಯುಜೆ, ಸೂರಿ ಪ್ಸೇರಶಸ್ರಿತಿ, ಪಾಂಡೇಶ್ವರ ಪ್ರಸಶ್ತಿ, ಸಹಿತ 20ಕ್ಕೂ ಹೆಚ್ಚು ಪ್ರಶಸ್ತಿ ಗೌರವ, ಸಾವಿರಕ್ಕೂ ಹೆಚ್ಚು ಸನ್ಮಾನಗಳು ಇವರ ಮುಡಿಗೇರಿವೆ.

ಯಕ್ಷಗಾನ ಸಂಗೀತ, ನಾಟಕ, ಗಮಕ ಕಲೆಗಳಲ್ಲಿ ಪರಿಣಿತಿ; ಎರಡು ಸಾವಿರಕ್ಕೂ ಹೆಚ್ಚು ಕಲಾಪ್ರದರ್ಶನ, 22ನೇ ರಾಜ್ಯ ಪತ್ರಕರ್ತರ ಸಮ್ಮೇಳನ, 12 ಮತ್ತು 11ನೇ ರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನ, ಥ್ಯಾಲ್ಯಾಂಡ, ಇಂಡೋನೇಷಿಯಾ, ಮಲೇಶಿಯಾ ಪ್ರವಾಸ ಮತ್ತು ಪ್ರವಾಸ ಅಧ್ಯಯನ ಕೃತಿ, ಪತ್ರಿಕಾ ತರಬೇತಿ ಶಿಬಿರ, ನೂರಾರು ಯುವ ಪತ್ರಕರ್ತ, ಬರೆಹಗಾರರಿಗೆ ಉತ್ತೇಜನ ನೀಡಿ ಬೆಳೆಸುವಿಕೆ. 

ಎಲ್.ಎಸ್‌. ಶಾಸ್ತ್ರಿ