About the Author

ಲಕ್ಷ್ಮಣ ಎಸ್. ಚೌರಿ ಅವರು ಮೂಲತಃ ಬಾಗಲಕೋಟೆ ಜಿಲ್ಮಲೆಯ ಜಮಖಂಡಿ ತಾಲೂಕಿನ ಅಡಿಹುಡಿಯ ತೋಟದಮನೆಯವರು. ವೃತ್ತಿಯಿಂದ ಶಿಕ್ಷಕರಾಗಿ ರಾಯಬಾಗ ತಾಲೂಕಿನ ಕುಡಚಿ ಅಜಿತಬಾನೆ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯಗುರುಗಳಾಗಿ 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಭಾಷಾ ಕೌಶಲವನ್ನು ವೃದ್ಧಿಸಲು ಒತ್ತಕ್ಷರವಿಲ್ಲದ ಕಥೆಗಳನ್ನು ಬರೆಯುವುದು ರೂಢಿಸಿಕೊಂಡಿದ್ದಾರೆ. ಈ ಕಲೆಯು ಹೊಸ ಬಂಧವನ್ನು ಹಾಗೂ ಹೊಸ ಪ್ರಯೋಗವನ್ನು ಸೃಷ್ಟಿಸಿದೆ.

ಕೃತಿಗಳು: ಚೌರೀಶನ ಕಥೆಗಳು (ಒತ್ತಕ್ಷರವಿಲ್ಲದ ಕಥೆಗಳ ಸಂಕಲನ), ’ಹೊಂಬೆಳಕು’ (ಸಂಪಾದಿತ ಕೃತಿ), ’ಆಕಾಶ ಕಾವ್ಯ’ (ಸಂಪಾದಿತ ಕೃತಿ), ’ಮಗು ನೀ ನಗು’ (ಮಕ್ಕಳ ಕವಿತೆಗಳು), ’ನೂರು ಹನಿ’ (ಹನಿಗವನಗಳು), ’ಉಪ್ಪಾರ ಕ್ರಾಂತಿ’ (ಸಂಪಾದಿತ ಕೃತಿ), ’ಭಗೀರಥ ಜ್ಯೋತಿ’ (ಸಂಪಾದಿತ ಕೃತಿ), ’ಸಂಗೀತ ದರ್ಶನ’ (ಸಂಪಾದಿತ ಕೃತಿ), ’ಚೌರೀಶನ ಕಥೆಗಳು’, ’ಜಾನಪದ ಮಕ್ಕಳ ಹಾಡುಗಳು’ ಕೃತಿಗಳನ್ನು ಹೊರ ತಂದಿದ್ದಾರೆ. ’ಹರದಾರಿ ಮಾತು’ ಮತ್ತು ’ಮಕ್ಕಳ ಜಾನಪದ ಆಟಗಳು’ ಇವರ ಇತ್ತೀಚಿನ ಕೃತಿಗಳು.

ಪ್ರಶಸ್ತಿ-ಪುರಸ್ಕಾರಗಳು: ಕಂಚ್ಯಾಣಿ ಶರಣಪ್ಪ ದತ್ತಿ ನಿಧಿ ಪ್ರಶಸ್ತಿ, ದೇವಿ ಕೃಪಾ ಕುಟೀರ ದತ್ತಿ ನಿಧಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು  ಲಭಿಸಿವೆ.

ಲಕ್ಷ್ಮಣ ಎಸ್ ಚೌರಿ

(08 Aug 1964)