About the Author

ಲೇಖಕಿ ಲಕ್ಷ್ಮೀದೇವಿ ಶಾಸ್ತ್ರಿ ಅವರು ಗುಲಬರ್ಗಾ ಜಿಲ್ಲೆಯ ಶಹಾಬಾದದವರು.  02-08-1950 ರಂದು ಜನನ.  ತಂದೆ ಶಿವಬಸಯ್ಯ ನಂದೀಧ್ವಜ, ತಾಯಿ ರಾಚಮ್ಮ ನಂದೀಧ್ವಜ.. ಎಂ.ಎ., ಬಿ.ಇಡಿ ಪದವೀಧರರು. ನಿವೃತ್ತ ಉಪನ್ಯಾಸಕಿ. 

ಕೃತಿಗಳು: ನಾಲ್ಕು ಸಾಲು, ಮರೀಚಿಕೆ (1985), ಮೌನ ಮಿಡಿದಾಗ (2012) ಇವು ಕವನ ಸಂಕಲನಗಳು, ಪಂ. ತಾರಾನಾಥರು 1992), ಎಲ್ಲಾ ನಿನ್ನ ಹೆಸರಲ್ಲಿ, ಸುಸಂಸ್ಕೃತರು, ಹೃದಯಕ್ಕೆ ಹತ್ತಿರಾದವರು ಮತ್ತು ಇತರ ಕಥೆಗಳು, ರಾಯಚೂರು ಕೋಟೆ (ಕಥಾ ಸಂಕಲನಗಳು),  ನಮ್ಮವರು (ಚಿಂತನ ಸಂಕಲನ), ಹೊಂಗಿರಣ (ಲೇಖನ ಸಂಕಲನ) ಕೃತಿಗಳನ್ನು ಪ್ರಕಟಿಸಿದ್ದಾರೆ.

ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ (2002) ರಾಯಚೂರು ಜಿಲ್ಲೆ 2ನೇ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಖಿಲ ಭಾರತೀಯ 3ನೇ ಕವಯತ್ರಿ ಸಮ್ಮೇಳನ (2002)  ಉತ್ತಮ ಕೃತಿ ಪ್ರಶಸ್ತಿ ಲಭಿಸಿದೆ.

ಲಕ್ಷ್ಮೀದೇವಿ ಶಾಸ್ತ್ರಿ

(02 Aug 1950)