About the Author

ಕೋಲಾರ ಮೂಲದ ಲಕ್ಷ್ಮೀಪತಿ ಕೋಲಾರ ಅವರು ಹವ್ಯಾಸಿ ಪತ್ರಕರ್ತರು, ಕವಿ, ವಿಮರ್ಶಕ, ನಾಟಕಕಾರ, ಜಾನಪದ ಸಂಶೋಧಕರು.  ದಕ್ಷಿಣ ದಂಡಾಜೀವಿಕ, ಅಲ್ಲಮನ ಬಯಲಾಟ (ನಾಟಕ) ಇತ್ಯಾದಿ ಕೃತಿಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. 

ಪ್ರಶಸ್ತಿ-ಗೌರವಗಳು: ಗಿರೀಶ್ ಕಾಸರವಳ್ಳಿ, ನಾಗಾಭರಣ ನಿರ್ದೇಶಿಸಿದ ರಾಜ್ಯ,ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಿಗೆ ಅವರು ಸಂಭಾಷಣೆ ಬರೆದಿದ್ದಾರೆ. ಅವರ ’ಬೇರು’ ಮತ್ತು ’ಮುಖಾಮುಖಿ’ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಬಹುಮಾನ ಬಂದಿದೆ. ವೀಚಿ ಸಾಹಿತ್ಯ ಪ್ರಶಸ್ತಿ, ಜೋಳದರಾಶಿ ದೊಡ್ಡಣ ಗೌಡ ಪ್ರಶಸ್ತಿ, ಸಂಸ ರಂಗಪುರಸ್ಕಾರ ಪ್ರಶಸ್ತಿಗಳೂ ಸಂದಿವೆ. ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು 2013ರ ಸಾಲಿನಲ್ಲಿ ವರ್ಷದ ಶ್ರೇಷ್ಠಉದಯೋನ್ಮುಖ ಸಾಹಿತ್ಯ ಕೃತಿಯಾಗಿ ಲಕ್ಷ್ಮೀಪತಿ ಕೋಲಾರ ಅವರ ಅಲ್ಲಮನ ಬಯಲಾಟ ನಾಟಕಕ್ಕೆ ಪ್ರಶಸ್ತಿ ನೀಡಲಾಗಿದೆ. ಸಿದ್ಧಾರ್ಥ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಅವರು ತಮ್ಮ ತಂದೆ ಎಚ್‌.ಎಂ.ಗಂಗಾಧರಯ್ಯ ಹೆಸರಿನಲ್ಲಿ ನೀಡುವ 'ರಾಷ್ಟ್ರೀಯ ಸಂಸ್ಕೃತಿ ಪುರಸ್ಕಾರ ಪ್ರಶಸ್ತಿ' ಲಭಿಸಿದೆ. 

 

ಲಕ್ಷ್ಮೀಪತಿ ಕೋಲಾರ