ಲಲಿತಾ ರೈ ಆರ್. ಅವರು ಪ್ರೌಢಶಾಲೆಯ ನಿವೃತ್ತ ಅಧ್ಯಾಪಕಿ. 22-08-1928 ರಂದು ಮಂಗಳೂರಿನ ಕೊಡಿಯಾಲ ಬೈಲಿನಲ್ಲಿ ಜನಿಸಿದರು.
‘ಚಿತ್ತಗಾಂಗಿನ ಕ್ರಾಂತಿವೀರರು’, ‘ಕನ್ನಡ ಸಣ್ಣ ಕತೆಗಳ ಸಂಕಲನ-2', `ಮತ್ತೆ ಬೆಳಗಿತು', `ಸೊಡರು ಮತ್ತು ಇತರ ಕಥೆಗಳು', `ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕತೆಗಳು', `ತುಳು ಸಣ್ಣಕತೆಗಳ ಸಂಕಲನ-1', ಕೃತಿಗಳನ್ನು ಪ್ರಕಟಿಸಿದ್ದಾರೆ. ‘ದೇಸಾಂತರ’, ‘ಬೋಂಟೆ ದೇರೆಂಡ್’ ಅವರ ತುಳು ಕಾದಂಬರಿಗಳು.
ಅವರ ‘ಇಂಟರ್‌ನೆಟ್‌ನ ಒಳಗೆ ಮತ್ತು ಇತರ ಕಥೆಗಳು’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ತ್ರಿವೇಣಿ ಪುರಸ್ಕಾರ, ನಿರತ ಸಾಹಿತ್ಯ ಸಂಪದ ಸಂಸ್ಥೆಯಿಂದ ‘ಓಟು ಯಾರಿಗೆ’ ಕತೆಗೆ ಮೊದಲ ಬಹುಮಾನ ಸಂದಿದೆ.