About the Author

ದಿ. ಲತಾ ಜಿ. ಕುಲಕರ್ಣಿ ಅವರು ಮೂಲತಃ ಬಿಜಾಪುರದವರು. ಕನ್ನಡ ದಿನಪತ್ರಿಕೆಗಳಲ್ಲಿ ಸಾಮಾಜಿಕ ವಿಷಯಗಳ ಕುರಿತು ಓದುಗರ ಅಂಕಣಕ್ಕೆ ಓಲೆ ಬರೆಯುವ ಹಾಗೂ ಮಹಿಳೆಯರ ಸಮಸ್ಯೆಗಳ ಕುರಿತು ಲೇಖನಗಳನ್ನು ಬರೆಯುವ ಹವ್ಯಾಸ ಇವರದ್ದಾಗಿತ್ತು. ಬರವಣಿಗೆಯ ಜೊತೆಗೆ ಓದುವ ಆಸಕ್ತಿಯನ್ನೂ ಬೆಳೆಸಿಕೊಂಡಿದ್ದ ಇವರು, ಕನ್ನಡದ ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತ, ಎಸ್.‌ ಎಲ್.‌ ಭೈರಪ್ಪ, ತ. ರಾ. ಸು,, ದ. ರಾ. ಬೇಂದ್ರೆ ಅವರ ಕೃತಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಆರೋಗ್ಯ ಇಲಾಖೆಯಲ್ಲಿ ಸೇವೆಯಲ್ಲಿದ್ದ ಮತ್ತು ಕವಿಯಾಗಿರುವ ಜಿ. ಕೆ. ಕುಲಕರ್ಣಿಯವರನ್ನು ವಿವಾಹವಾದ ಇವರು, ಪತಿಯ ಕೆಲಸದ ವರ್ಗಾವಣೆಯಿಂದಾಗಿ ಶಿವಮೊಗ್ಗ, ಬಾಗಲಕೋಟೆ, ಸೇರಿ ಹಲವಾರು ಜಿಲ್ಲೆಗಳಲ್ಲಿ ಬದುಕಿನ ಅನುಭವ ಪಡೆದವರು. ಆಕಾಶವಾಣಿ ಧಾರವಾಡ ಮತ್ತು ಹೊಸಪೇಟೆಯಲ್ಲಿ ಉಪನ್ಯಾಸವನ್ನೂ ನೀಡಿದ್ದಾರೆ. 2021 ಮೇ 5ರಂದು ಹೃದಯಾಘಾತದಿಂದ ತೀರಿಕೊಂಡರು. ಬಳಿಕ ಇವರು ಬರೆದ ಎಲ್ಲಾ ಲೇಖನಗಳ ಸಂಗ್ರಹವನ್ನು ಕುಟುಂಬದವರು ʻಮನ್ವಂತರʼ ಎಂಬ ಪುಸ್ತಕವಾಗಿ ಹೊರತಂದಿದ್ದಾರೆ. ಅಲ್ಲದೆ, ಇವರ ನೆನಪಿನಲ್ಲಿ ಕುಟುಂಬದವರು ʻಲತಾ ಕುಲಕರ್ಣಿ ಸಾಂಸ್ಕೃತಿಕ ವೇದಿಕೆʼ ಪ್ರತಿಷ್ಠಾನದಡಿ  2022ರಿಂದ ಪ್ರತಿಭಾ ಪುರಸ್ಕಾರವನ್ನು ಪ್ರಾರಂಭಿಸಿದ್ದಾರೆ.

ಲತಾ ಜಿ. ಕುಲಕರ್ಣಿ

(25 Jan 1956)

Books by Author