About the Author

ಲೇಖಕಿ ಲತಾ ಜೋಶಿ ಮೂಲತಃ ಉತ್ತರ ಕರ್ನಾಟಕದವರು. ಹುಟ್ಟೂರು ರಾಣೆಬೆನ್ನೂರು ಹಾಗೂ ಬ್ಯಾಡಿಗಿಯ ಸೊಸೆಯೂ ಹೌದು. ಸದ್ಯ ಮಕ್ಕಳೊಂದಿಗೆ ಬೆಂಗಳೂರಲ್ಲಿ ವಾಸವಿದ್ದು,ಕೆಲವು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ . ಓದುವ ಹವ್ಯಾಸ ಅತೀವ.. ಬರೆಯುವುದರಲ್ಲಿ ತುಂಬಾ ಆಸಕ್ತಿ. ದಿನಪತ್ರಿಕೆಗಳಲ್ಲಿ ಇವರ ಅನೇಕ ಬರಹಗಳು ಪ್ರಕಟವಾಗಿವೆ..ಹಾಸ್ಯ ಪ್ರಬಂಧ ನೆಚ್ಚಿನ ವಿಷಯ. 

ಫೇಸ್ಬುಕ್ ನಲ್ಲಿ ಕನ್ನಡ ಕಥಾಗುಚ್ಛ ಎಂಬ ಸಾಹಿತ್ಯದ ಗುಂಪು ಮೂರುವರೆ ವರ್ಷದ ಹಿಂದೆ ಪ್ರಾರಮಬಿಸಿ, ಅದರ ಸಂಸ್ಥಾಪಕಿ, ಮುಖ್ಯ ನಿರ್ವಾಹಕಿಯಾಗಿದ್ದಾರೆ.

ಕೃತಿ; ಜೀವನ ಜೋಕಾಲಿ (ಕಾದಂಬರಿ)

ಲತಾ ಜೋಶಿ