ಲೀಲಾವತಿ ಎಸ್. ರಾವ್ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ರಾಷ್ಟ್ರೀಯ ಭಾಷಾ ವಿಶಾರದ ನಿವೃತ್ತ ಪ್ರಾಧ್ಯಾಪಕರಾಗಿ ಸದ್ಕಾಯ ನಿವೃತ್ತರು. 1953 ಜುಲೈ 10 ರಂದು ದಾವಣಗೆರೆಯಲ್ಲಿ ಜನಿಸಿದರು. ತಂದೆ ಪಿ. ಹೆಚ್. ಸೇತುರಾವ್, ತಾಯಿ ಶಾಂತಾಬಾಯಿ. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಮಾಜಿ ಅಧ್ಯಕ್ಷರು. ಕಾಳಜಿ ಸಂಸ್ಥೆಯ ಕಾರ್ಯಾಧ್ಯಕ್ಷೆಯಾಗಿದ್ಧಾರೆ.
ಕೃತಿಗಳು : ದಾಸಸಾಹಿತ್ಯದ ಕೆಲವು ನೋಟಗಳು (ವಿಮರ್ಶೆ), ಏರುವ ಬಾ ಕೇದಾರ ಶಿಖರ (ಪ್ರವಾಸ ಸಾಹಿತ್ಯ), ಸೀತಾದೇವಿ ಪಡುಕೋಣೆ (ವ್ಯಕ್ತಿಚಿತ್ರ) -2007, ನಡುಗನ್ನಡ ಕಾವ್ಯ (ಸಂಪಾದಿತ), ಕಿರಿಯರಿಗೆ ಹಿರಿಯರ ಕಥೆಗಳು, ಹೆಳವನ ಕಟ್ಟೆ ಗಿರಿಯಮ್ಮನ ಕೀರ್ತನೆಗಳು, ಪ್ರಾಚೀನ ಸಾಹಿತ್ಯದಲ್ಲಿ ಮಹಿಳೆ, ನಿಡಗುರುಕಿ ಜೀವುಬಾಯಿಯವರ ಕೀರ್ತನೆಗಳು.
ಅವರಿಗೆ ‘ಜಿ.ಪಿ. ರಾಜರತ್ನಂ ಪ್ರಶಸ್ತಿ’, ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ 'ಶ್ರೀ ಗುರು ಗೋವಿಂದ ಪ್ರಶಸ್ತಿ' ಲಭಿಸಿವೆ.