About the Author

ಡಾ. ಲೀನಾ ನಾಯ್ಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಕರ್ನಾಟಕ ವಿ.ವಿ.ಯಿಂದ ಬಿ.ಎ, ಹಾಗೂ ಎಂ.ಎ. ಪದವೀಧರರು. ‘ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು  ಪಿಎಚ್ ಡಿ ನೀಡಿ ಗೌರವಿಸಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಿ.ಡಿ. ಶೆಟ್ಟಿ ವ್ಯವಹಾರ ನಿರ್ವಹಣೆ ಪದವಿ ಕಾಲೇಜು, ಹುಬ್ಬಳ್ಳಿಯ  ಚಿನ್ಮಯ ಪದವಿಪೂರ್ವ ಕಾಲೇಜು, ಡಾ. ಆರ್.ಬಿ. ಪಾಟೀಲ ರೋಟರಿ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು ಮತ್ತು ಎಸ್ ಎಸ್ ಕೆ ಪದವಿಪೂರ್ವ ಕಾಲೇಜು ಹೀಗೆ ವಿವಿಧೆಡೆ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಡುಬೆಳ್ಳೆಯ ನೆಲ್ಲಿಕಟ್ಟೆಯ ಜ್ಞಾನಗಂಗಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ದೇವರಾಜ ಅರಸ್ ಸಂಶೋಧನಾ ಸಂಸ್ಥೆಯಿಂದ ‘ನಡೆದ ‘ಹಾಲಕ್ಕಿ ಒಕ್ಕಲ ಜನಾಂಗದ ಸಮಗ್ರ ಅಧ್ಯಯನ ಹಾಗೂ ಮಾಹಿತಿ ಸಂಗ್ರಹಣಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಕಾರ್ಯ ಮತ್ತು ಜಾನಪದ ಶಬ್ದಕೋಶ ಎಂಬ ಯೋಜನೆಯಡಿಯೂ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಫಾಸಿಲ್ಸ್ ಸಂಸ್ಥೆ ತಮಿಳುನಾಡಿನ ನಾಗರಕೊಯಿಲ್ ನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಮಾವೇಶದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಸ್ಥಳೀಯ ಚಾನೆಲ್ ಒಂದರಲ್ಲಿ ಪ್ರಸಾರವಾದ ‘ಕಾಲ’ ಶೀರ್ಷಿಕೆಯ ಧಾರಾವಾಹಿಗೆ ಕಥೆ ಬರೆದಿದ್ದಾರೆ..

ಕೃತಿಗಳು: ಹಾಲಕ್ಕಿಯರ ಬದುಕು ಹಾಗೂ ಸಾಹಿತ್ಯದ ಸ್ಥಿತ್ಯಂತರಗಳು (ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಬುಡಕಟ್ಟಿನಲ್ಲಿ ಉಂಟಾಗುತ್ತಿರುವ ಸ್ಥಿತ್ಯಂತರಗಳ ಕುರಿತ ಮಹಾಪ್ರಬಂಧ) 

ಲೀನಾ ನಾಯ್ಕ

(07 Nov 1979)