About the Author

ಲೇಖಕ ಎಂ.ಸಿ, ಪ್ರಕಾಶ್ ಅವರು ಮೈಸೂರಿನ ಮಹಾರಾಜ ಕಾಲೇಜು ಮತ್ತು ಮಾನಸ ಗಂಗೋತ್ರಿಗಳಲ್ಲಿ ಬಿ.ಎ. ಮತ್ತು ಇಂಗ್ಲಿಷ್ ಎಂ.ಎ. ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ 'ದಿ ಥಿಯರಿ ಆಫ್ ದಿ ಅಬ್ಬರ್ಡ್ ಇನ್ ವೆಸ್ಟರ್ನ್ ಲಿಟರೇಚರ್ ಆಂಡ್ ಇಟ್ಸ್ ಇನ್ ಫ್ಲುಯೆನ್ಸ್ ಆನ್ ಕನ್ನಡ ಲಿಟರೇಚರ್'’ ವಿಷಯದ ಮೇಲೆ ಬರೆದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ, ಬೆಂಗಳೂರಿನ ವಿದ್ಯಾ ವರ್ಧಕ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ 37 ವರ್ಷಗಳು ಇಂಗ್ಲಿಷ್ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನುವಾದದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ನರಸಿಂಹಸ್ವಾಮಿಯವರ 50 ಹಾಗೂ 25 ಕವನಗಳ ಅನುವಾದಗಳನ್ನೊಳಗೊಂಡ 'ಬ್ರೆಡ್ ಕಮ್ಸ್ ಹೋಂ' ಮತ್ತು 'ಸಾಂಗ್ ಆಫ್ ಲೈಫ್' ಎಂಬ ಕವನ ಸಂಕಲನಗಳು, ಎಂ ವೈ ಘೋರ್ಪಡೆಯವರ 'ಡೌನ್ ಮೆಮೊರಿ ಲೇನ್'ನ ಅನುವಾದ, 'ನೆನಪಿನ ಚಿತ್ರಗಳು': ಡಾ. ಆರ್. ಗಣೇಶ aವರ 'ಅಲಂಕಾರಶಾಸ್ತ್ರದ ಅನುವಾದ 'ಇಂಡಿಯನ್ ಈಸ್ಥೆಟಿಕ್ಸ್': ಪ್ರೊ. ಟಿ, ಯಲ್ಲಪ್ಪ ಅವರ 'ಕಡಲಿಗೆ ಕಳಿಸಿದ ದೀಪ' ಕವನಸಂಕಲನದ ಅನುವಾದ 'ದಿ ಆಂಕಲೆಟ್ಸ್, ನವಕರ್ನಾಟಕ ಪ್ರಕಟಿಸಿದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಕೈಪಿಡಿಗಳ ಭಾಷಾಂತರ ಇವು ಹಲವು ಮುಖ್ಯ ಅನುವಾದಗಳಾಗಿವೆ. ನವಕರ್ನಾಟಕ ಪ್ರಕಟಿಸಿದ 'ಕಾಲೇಜು ವಿದ್ಯಾರ್ಥಿಗಳ ಪೋಷಕರ ಜವಾಬ್ದಾರಿಗಳು' ಅವರ ಸ್ವತಂತ್ಯ್ರ ಕೃತಿಯಾಗಿದೆ.

ಎಂ.ಸಿ, ಪ್ರಕಾಶ್