About the Author

ಅಧ್ಯಾಪಕ, ಲೇಖಕ ಎಂ.ಜಿ. ಚಂದ್ರಶೇಖರಯ್ಯ ಅವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿಯಲ್ಲಿ. ತಂದೆ ಆರ್. ಗುಡುದಯ್ಯ(ಶಿಕ್ಷಕರು), ತಾಯಿ ಎಂ.ರಂಗಮ್ಮ. ಮಲ್ಲಪ್ಪನಹಳ್ಳಿ, ಚಿತ್ರದುರ್ಗ, ಸಿದ್ಧಗಂಗೆ, ಸಿರಿಗೆರೆ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ 1981ರಿಂದ 2016ರ ವರೆಗೆ ಕನ್ನಡ ಅಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.

2016 ರಿಂದ ಡಾ.ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದ‌ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುದ್ದು, ‘ಬಸವಣ್ಣ - ಜೀವನ ಸಾಧನೆ’ ಮತ್ತು ‘ಬಚ್ಚಳ್ಳಿಯ ಬೆಳಕು’ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ‘ನಮ್ಮ ಕುವೆಂಪು’, ‘ಪ್ರಾಚೀನ ಕಾವ್ಯ ಸಂಗಮ’, ‘ಜೀವ ರೇಶಿಮೆ ಹುಳು’ ಕೃತಿಗಳನ್ನು ಸಂಪಾದಿಸಿದ್ದಾರೆ. ಇತರ ಲೇಖಕರೊಡಗೂಡಿ ‘ಬೆಂಗಳೂರು ಬಾಗಿನ’, ‘ನಲ್ಲೂರು’, ‘ಅಂತರ್ಜಲ’, ‘ಮಧ್ಯಕಾಲೀನ ಕನ್ನಡ ಕಾವ್ಯ’, ‘ಬಹುಮುಖಿ-1 ರಿಂದ ಬಹುಮುಖಿ-8’, ‘ಸಾಹಿತ್ಯ ಸಲ್ಲಾಪ’, ‘ಸಾಹಿತ್ಯ ಸಂವಾದ’ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ಸಂಪಾದಿಸಿದ್ದಾರೆ. ಪ್ರಸ್ತುತ ವಿಕಸನ ಮಾಲೆ ಪುಸ್ತಕಗಳನ್ನು ಬರೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ದೊಡ್ಡಬಳ್ಳಾಪುರದಲ್ಲಿ ವಾಸವಿದ್ದಾರೆ.

ಎಂ.ಜಿ. ಚಂದ್ರಶೇಖರಯ್ಯ