About the Author

ಸಾಹಿತಿ, ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ನಂಜುಂಡಾರಾಧ್ಯ ಅವರು 1914 ಆಗಸ್ಟ್‌ 1 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರು ತಾಲೂಕಿನ ಗುಂಡ್ಲಹಳ್ಳಿಯಲ್ಲಿ ಜನಿಸಿದರು. ತಂದೆ ಗಂಗಾಧರಯ್ಯ, ತಾಯಿ ವೀರಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಹಿಂದಿ ರಾಷ್ಟ್ರಭಾಷಾ ವಿಶಾರದ, ಕನ್ನಡದಲ್ಲಿ ವಿದ್ವಾನ್‌ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ವಿದ್ಯಾರ್ಥಿಯಾಗಿದ್ದಂದಿನಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. 

ಇವರು ಸಂಪಾದಿಸಿದ ಕೃತಿಗಳೆಂದರೆ ಕೈವಲ್ಯೋಪನಿಷತ್‌, ಮುಂಡಕೋಪನಿಷತ್‌, ಈಶಾವಾಸ್ಯೋಪನಿಷತ್‌, ಬ್ರಹ್ಮಸೂತ್ರ ವೃತ್ತಿ, ತತ್ತ್ವ ಪ್ರಕಾಶ, ಬಸವಪ್ಪಶಾಸ್ತ್ರಿಗಳ ಸಮಗ್ರ ಕೃತಿಗಳ ಬೃಹತ್ ಸಂಪುಟ, ಶಿವಾಗಮ, ಸೌರಭ, ಭಾರತೀಯದರ್ಶನ, ಶಕ್ತಿ ವಿಶಿಷ್ಟಾದ್ವೈತದರ್ಶನ, ದರ್ಶನ ದೀಪ್ತಿ, ದೇವರ ದಾಸಿಮಯ್ಯ ಪ್ರಶಸ್ತಿ ಮೊದಲಾದುವು. ವಿಮರ್ಶಾಕೃತಿಗಳು-ಮಹಾಕವಿ ಭಾರವಿ, ಕವಿ ಮುರಾರಿ, ಕವಿಶ್ರೀಹರ್ಷ, ಭಟ್ಟನಾರಾಯಣ, ಮಾಘಕವಿ. ಖಂಡಕಾವ್ಯಗಳು-ಪಕ್ಷ್ಮಲಾಕ್ಷಿ, ವಿಜಯನಾದ, ಗದ್ಯ ಕೃತಿಗಳು-ಅರ್ಜುನ ವಿಜಯ, ಚಂದ್ರಗುಪ್ತನ ಭಾಗ್ಯ, ಸತ್ಯವ್ರತಿ ಭೀಷ್ಮ. ನಾಟಕ-ಶಿವನ ಸೋಲು, ದಸ್ಯುಮಹರ್ಷಿ, ಐಲೂಷ. ಜೀವನಚರಿತ್ರೆ-ಬಸವಪ್ಪಶಾಸ್ತ್ರಿ, ಹೇಮರೆಡ್ಡಿ ಮಲ್ಲಮ್ಮ ಮುಂತಾದವು. ಇವರು 1991 ನವೆಂಬರ್‌ 7ರಂದು ನಿಧನರಾದರು. 

ಎಂ.ಜಿ. ನಂಜುಂಡಾರಾಧ್ಯ

(01 Aug 1914-11 Jul 1991)