About the Author

ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ ೧೯೭೫ರಲ್ಲಿ ಜನನ. ದಿ.ಎಂ.ಆರ್. ಗುಂಡಪ್ಪ ಹಾಗೂ ಎಂ.ಎನ್. ಜಯಲಕ್ಷಮ್ಮ ದಂಪತಿಗಳ ಕಿರಿಯ ಪುತ್ರಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತçದಲ್ಲಿ ಎಂ.ಎ. ಮತ್ತು ಭಾರತೀಯ ವಿದ್ಯಾ ಭವನದ ಕನ್ನಡ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಸೂರ್ಯೋದಯ, ಜೀವನಾಡಿ, ಗೃಹಶೋಭಾ ಪತ್ರಿಕೆಗಳಲ್ಲಿ ಒಂದು ದಶಕದ ಕಾಲ ಉಪ-ಸಂಪಾದಕಿ, ವರದಿಗಾರ್ತಿ, ಅನುವಾದಕಿಯಾಗಿ ಕೆಲಸ ಮಾಡಿದ್ದಾರೆ. ಇಂಡಿಗೋ ಮಲ್ಟಿ ಮೀಡಿಯಾ ಪ್ರಕಟಣಾ ಸಹ ಸಂಸ್ಥಾಪಕಿಯಾಗಿ ದುಡಿದಿದ್ದಾರೆ.

ಕಿಂಚ ಸ್ಮಾರಕ ಪ್ರಶಸ್ತಿ ಪುರಸ್ಕೃತರು. ಇವರ ಲೇಖನಗಳು, ಅನುವಾದಿತ ತೆಲುಗು ಕಥೆಗಳು ಸುಧಾ, ಮಯೂರ, ತುಷಾರ, ಸೂರ್ಯೋದಯ, ಗೃಹಶೋಭಾ, ವಿಜಯಕರ್ನಾಟಕ, ಕೆಂಡಸಂಪಿಗೆ, ಡೆಕ್ಕನ್ ನ್ಯೂಸ್, ಅವಧಿ, ಹಿತೈಷಿಣಿ, ನಸುಕು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಕಟಿತ ಅನುವಾದಿತ ಕೃತಿಗಳು ‘ಜಾಲ’, ‘ಮೌನಸಾಕ್ಷಿ’, ‘ಪಾಠ ಹೇಳುವುದು ಒಂದು ಕಲೆ’, ‘ಕನಸಿನ ರಹಸ್ಯಗಳು’, ‘ಕಾಲೇಜ್ ಕ್ಯಾಂಪಸ್’ ‘ಅಮ್ಮ-ಅಪ್ಪ ಜೀನಿಯಸ್’ ಮತ್ತು ಸಂದರ್ಶನಗಳ ಗುಚ್ಛ ‘ಸಾಧಕರೊಡನೆ’. 

ಎಂ.ಜಿ. ಶುಭಮಂಗಳ