About the Author

ಎಂ.ಕೆ. ಕೆಂಪೇಗೌಡ ಅವರು ಮೂಲತಃ ಪಾಂಡವಪುರ ತಾಲೂಕಿನ ಮೂಡಲಕೊಪ್ಪಲಿನವರು. ತಂದೆ ಕರಿಗೌಡ, ತಾಯಿ ಚಿಕ್ಕತಾಯಮ್ಮ. 1982ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ಮಾಡಿ ಸ್ನಾತಕೊತ್ತರ ಎಂ.ಎ. ಪದವಿ ಪಡೆದಿರುವ ಕೆಂಪೇಗೌಡ ಅವರು ಭಾಷಾಂತರ ವಿಷಯದಲ್ಲು ಡಿಪ್ಲೋಮಾ ಹಾಗೂ ಎಂ.ಫಿಲ್. ಪದವಿ ಪಡೆದಿದ್ದಾರೆ. ಉನ್ನತ ಶಿಕ್ಷಣ ಪಡೆದ ನಂತರ 1982ರಲ್ಲಿ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಜೀವನಕ್ಕೆ ಕಾಲಿಟ್ಟ ಶ್ರೀಯುತರು ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿಯೂ ಕೂಡ 1983 ರಿಂದ 1991ರವರೆಗೆ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ರಾಜ್ಯ ಸರ್ಕಾರದಲ್ಲಿ ಪ್ರಮುಖವಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರೂಪ್‌-ಬಿ ವರ್ಗಕ್ಕೆ ಸೇರಿದ ಹುದ್ದೆಯಿಂದ ರಾಜ್ಯಮಟ್ಟದವರೆಗಿನ ಎಲ್ಲಾ ಹಂತದಲ್ಲಿನ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಕೃತಿಗಳು : ಗ್ರಾಮಸುರಾಜ್ಯ

ಎಂ.ಕೆ. ಕೆಂಪೇಗೌಡ