About the Author

ಎಂ.ಕೆ.ಶೇಖ್ (ಮೌಕುಶೇ) ಮೂಲತಃ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದವರಾದವರು. ಪ್ರಸ್ತುತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜುನ್ನೇದಿಯಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕನ್ನಡ ಭಾಷೆಯ ಶಿಕ್ಷಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಕವನ ಸಂಕಲನ, ಕಥಾ ಸಂಕಲನ, ವಿಮರ್ಶೆ ಕೃತಿ, ಆಧುನಿಕ ವಚನ ಸಂಕಲನ, ಚುಟುಕು ಸಂಕಲನ, ಸಂಪಾದನಾ ಕೃತಿ ಹಾಗೂ ಕಾದಂಬರಿಯಂತ ಎಲ್ಲಾ ಪ್ರಕಾರದ ಸಾಹಿತ್ಯದ ಒಟ್ಟು ಎಂಟು ಕೃತಿಗಳನ್ನು ಬರೆದು ಲೋಕಾರ್ಪಿಸಿದ್ದಾರೆ. ಇವರ "ನೂಲು" ಎಂಬ ಕಥಾಸಂಕಲನದ "ಮನುಷ್ಯತ್ವದೆಡೆಗೆ ಆಹ್ವಾನ" ಎಂಬ ಕಥೆಯು ವಿಜಯಪುರ ಜಿಲ್ಲೆಯ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಬಿಕಾಂ ಮೂರನೆ ಸೆಮಿಸ್ಟರಗೆ ಪಠ್ಯವಾಗಿದೆ. ಶಿಕ್ಷಕ ವೃತ್ತಿ ಹಾಗೂ ಸಾಹಿತ್ಯ ರಚನೆಯೊಂದಿಗೆ ಆಧುನಿಕ ಪ್ರಾಚೀನ ದೇಶ ವಿದೇಶಗಳ ನಾಣ್ಯ ನೋಟುಗಳ ಸಂಗ್ರಹಣೆಯೂ ಇವರ ಹವ್ಯಾಸವಾಗಿದೆ. ಇವರ ಸಂಗ್ರಹದಲ್ಲಿ ಇಲ್ಲಿಯವರೆಗೆ ಎರಡು ನೂರಕ್ಕೂ ಹೆಚ್ಚು ಹೊಸ -ಹಳೆಯ , ದೇಶ ವಿದೇಶಗಳ ನಾಣ್ಯಗಳಿದ್ದು, ಅರವತ್ತಕ್ಕೂ ಹೆಚ್ಚು ದೇಶಗಳ ನೋಟುಗಳಿವೆ. ಈ ಸಂಗ್ರಹವು ಕರ್ನಾಟಕ ಅಚಿವರ್ಸ ಬುಕ್ ಆಫ್ ರೆಕಾರ್ಡಗೆ ಸೇರಿದೆ. ಇದಲ್ಲದೆ ದಿನಪತ್ರಿಕೆಗಳಲ್ಲಿ ಬರುವ ವಿಶೇಷ ಚಿತ್ರಗಳ ಸಂಗ್ರಹಣೆ ಮತ್ತು ಅಂಚೆ ಚೀಟಿ ಸಂಗ್ರಹವೂ ಕಳೆದ ಇಪ್ಪತ್ತು ವರ್ಷಗಳಿಂದಲೂ ಮಾಡುತಿದ್ದಾರೆ. ಇವರಿಗೆ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಸನ್ಮಾನಗಳು ಸಂದಿವೆ.

ಕೃತಿಗಳು: ನೂಲು, ಜಾತಿಗಳ ಜಾಲದಿಂದ

ಎಂ.ಕೆ.ಶೇಖ್ (ಮೌಕುಶೇ)