About the Author

ಡಾ. ಎಂ. ರವಿನಾಯ್ಕ ಇವರು ಕುವೆಂಪು ವಿಶ್ವವಿದ್ಯಾ ನಿಲಯದಿಂದ ಎಂ.ಎ., ಎಂ.ಇಡಿ., ಪಿಎಚ್.ಡಿ. ಪದವಿಗಳನ್ನು ಪಡೆದವರು.  ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ದೂರಶಿಕ್ಷಣ ನಿರ್ದೇಶನಾಲಯದಲ್ಲಿ ಸಂಶೋಧನಾ ಹಾಗೂ ಬೋಧನಾ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. “ಬುಡಕಟ್ಟು ಹಕ್ಕಿಯ ಹಾಡು' (ಬಿ.ಟಿ. ಲಲಿತಾ ನಾಯಕ್ : ಜೀವನ ಮತ್ತು ಸಾಹಿತ್ಯ) - 2010, 'ಬಿ.ಟಿ. ಲಲಿತಾ ನಾಯಕ್ ಅವರ ಕಾವ್ಯದ ವೈಶಿಷ್ಟ್ಯಗಳು' –2011 ರಲ್ಲಿ ಪ್ರಕಟಗೊಂಡ  ಕೃತಿಗಳು. ಇವರು ಕರ್ನಾಟಕ ಸಂಘ (ಶಿವಮೊಗ್ಗ) ದ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪುರಸ್ಕಾರ (1999-2000) ಹಾಗೂ ಶ್ರೀ ಸೇವಾಲಾಲ್ ಪ್ರಶಸ್ತಿ (2011 ) ಪುರಸ್ಕೃತರು. 

ಎಂ. ರವಿನಾಯಕ್