About the Author

ಡಾ. ಎಂ.ಎಸ್‌.ಮದಭಾವಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದವರು. ಕನಾಟಕ ವಿ.ವಿ.ಯಿಂದ ಎಂ.ಎ (1975) ಹಾಗೂ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಹಾಗೂ ಕೃತಿ ಸಮೀಕ್ಷೆ (1997) ಕವಿವಿಗೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಬಿಎಲ್ ಡಿಇ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರಾಗಿ ನಿವೃತ್ತರಾದರು. ಸದ್ಯ, ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿಯಾಗಿದ್ದಾರೆ. 

ಕೃತಿಗಳು ಮತ್ತು ಸಂಪಾದನೆ: ಫ.ಗು.ಹಳಕಟ್ಟಿ ಚರಿತ್ರೆ ಸಾಹಿತ್ಯ (ಸಂ), ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಕಾಲಜ್ಞಾನ ಪದಗಳು (ಸಂ), ಮಧುರ ಚೆನ್ನರ ಜನ್ಮ ಶತಮಾನೋತ್ಸವ ಸ್ಮರಣ ಸಂಚಿಕೆ (ಸಂ), ಕಂಚ್ಯಾಣಿ ಶರಣಪ್ಪನವರ ಅಭಿನಂದನಾ ಗ್ರಂಥ (ಸಂ), ಬಸಣ್ಣ ಕೋರೆ ಅಭಿನಂದನಾ ಗ್ರಂಥ (ಸಂ), ಬಿಎಲ್ ಇಡಿ ಸಂಸ್ಥೆ ಚರಿತ್ರೆ, ಸಾಂಸ್ಥಿಕ ಪ್ರಜ್ಷೆ -ಡಾ. ಎಂ.ಎಂ. ಕಲಬುರ್ಗಿ ಕಿರು ಪುಸ್ತಿಕೆ, ಸುಮಾರು 25ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. 

ಹಲಸಂಗಿ ಗೆಳೆಯರ ಪ್ರತಿಷ್ಠಾನ, ಆದಿಲ್ ಶಾಹಿ ಸಾಹಿತ್ಯ ಅನುವಾದ ಯೋಜನೆ, ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಪ್ರಕಟಣೆ ಯೋಜನೆ, ಸಂಶೋಧಕ ಎಂ.ಎಂ. ಕಲಬುರ್ಗಿ ಸಾಹಿತ್ಯ ಪ್ರಕಟಣೆ ಯೋಜನೆ  ಹೀಗೆ ವಿವಿಧ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿದ್ದು, ಇವರಿಗೆ ಶ್ರೀ ಸಿದ್ಧೇಶ್ವರ ರತ್ನ ಪ್ರಶಸ್ತಿ-2020, ದೊರೆತಿದೆ. 

ಎಂ.ಎಸ್. ಮದಭಾವಿ

(01 Jan 0951)