About the Author

ಸಾಲಿಗ್ರಾಮ ಮಹಾಬಲೇಶ್ವರ ಆಚಾರ್ಯ ಕೊಡಂಕೂರಿನ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದಲ್ಲಿ ಗೌರವ ಅಧ್ಯಾಪಕರಾಗಿರುವ ಮಹಾಬಲೇಶ್ವರ ಆಚಾರ್ಯರು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇಲಾಖೆಯ ವಿವಿಧ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಆಚಾರ್ಯರು ನಿವೃತ್ತರಾಗುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದಲ್ಲಿ ಆಡಳಿತಾಧಿಕಾರಿಯಾಗಿದ್ದರು. ಅವರು ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾ ವಿಶ್ವಬ್ರಾಹ್ಮಣ ಯುವಜನ ಸಭಾದ ಜತೆ ಕಾರ್ಯದರ್ಶಿಯಾಗಿ, ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವಕರ್ಮ ವಿದ್ಯಾರ್ಥಿಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಸಂಸ್ಕೃತಿಯ ಪ್ರಸಾರದಲ್ಲಿ ತೊಡಗಿಕೊಂಡಿದ್ದಾರೆ. ಅಮರನಾಥ, ವೈಷ್ಣವೀ ದೇವಿ, ಬದರಿ, ಕೇದಾರ, ಹರಿದ್ವಾರ, ಹೃಷಿಕೇಶ, ಅಮೃತಸರ, ಗಯಾ, ಕಾಶಿ, ಪ್ರಯಾಗ, ನಲಂದ, ಅಲಹಾಬಾದ್ ಮುಂತಾಗಿ ದೇಶದಾದ್ಯಂತ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿರುವ ಆಚಾರ್ಯರು ದೇಶಸುತ್ತಿಯೂ ಕೋಶ ಓದಿಯೂ ಅನುಭವಸಂಪನ್ನರಾಗಿರುವವರು.

ಮಹಾಬಲೇಶ್ವರ ಆಚಾರ್ಯ