About the Author

ಲೇಖಕ ಮಹೇಶ ಹೆಗಡೆ ಹಳ್ಳಿಗದ್ದೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಕ್ಷೆ ಗ್ರಾಮ ವ್ಯಾಪ್ತಿಯ ಹಳ್ಳಿಗದ್ದೆ ಊರಿನವರು. ಹಳ್ಳಿಗದ್ದೆಯಲ್ಲಿ,ಪ್ರಾಥಮಿಕ ಶಿಕ್ಷಣ, ತಾರಗೋಡು ಹಾಗೂ ಭೈರುಂಬೆಯಲ್ಲಿ, ಕುಮಟಾದಲ್ಲಿ ಬಿ ಎಸ್.ಸಿ. ಪದವಿ ಪೂರ್ಣಗೊಳಿಸಿದರು. ಸದ್ಯ ಬೆಂಗಳೂರಿನಲ್ಲಿ ವಾಸ್ತವ್ಯ. ಗಜ಼ಲ್, ಕವಿತೆ, ಛಂದೋಬದ್ಧ ಕಾವ್ಯ, ರುಬಾಯಿ, ಚುಟುಕು, ಹನಿಗವನ, ಟಂಕಾ, ಹಾಯ್ಕುಗಳ ಬರಹ ಇವರ ಹವ್ಯಾಸ. ಮಾತ್ರವಲ್ಲ; ತಬಲಾ, ಕೊಳಲು, ವೀಣೆ, ಹೊಲಿಗೆ ಹಾಗೂ ಅಡುಗೆಯಲ್ಲಿಯೂ ಆಸಕ್ತಿ.

ಕೃತಿಗಳು: ಮಹತಿ (ಗಜಲ್ ಸಂಕಲನ)

ಮಹೇಶ ಹೆಗಡೆ ಹಳ್ಳಿಗದ್ದೆ

Books by Author