About the Author

ಲೇಖಕ ಮಾಲತೇಶ ಅಂಗೂರ ಮೂಲತಃ (ಜನನ: 03-07-1969) ಹಾವೇರಿಯವರು. ಕೌರವ ದಿನಪತ್ರಿಕೆಯ ಮುಖ್ಯ ವರದಿಗಾರರು. ಅಂಕಣ ಬರಹ, ಕವಿತೆ, ಕಥೆಗಳ ರಚನೆ. ಯೋಗಾಸನ, ಕ್ರಿಕೆಟ್, ಟೆನಿಸ್‌ನಲ್ಲಿ ಆಸಕ್ತರು. ವನ್ಯಜೀವಿಗಳ ಛಾಯಾಚಿತ್ರಗಳಿಗೆ ರಾಜ್ಯ-ಅಂತರ್ ರಾಷ್ಟ್ರೀಯ ಮನ್ನಣೆ ದೊರೆತಿದೆ.

‘ಹಾವೇರಿಯಾಂವ್ ಎಂಬುದು ಅವರ ಪತ್ರಿಕಾ ಅಂಕಣ ಬರಹಗಳ ಸಂಗ್ರಹ ಕೃತಿ. ‘ಬಣ್ಣದ ಗರಿ’ ಅಂಕಣ ಬರಹಗಳ ಕೃತಿ. 2016-17ನೇ ಸಾಲಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಅತ್ಯುತ್ತಮ ಅಂಕಣ ಬರಹ ಮಾಧ್ಯಮ ಪ್ರಶಸ್ತಿ, ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ಹಾಗೂ ಸಂಪಾದಕರ ಸಂಘದ ಅತ್ಯುತ್ತಮ ಅಂಕಣ ಬರಹ ರಾಜ್ಯ ಪ್ರಶಸ್ತಿ ಲಭಿಸಿದೆ.

ಹಾವೇರಿ ಜಿಲ್ಲೆಯಲ್ಲಿ ಯುವತಿಯರ ಮಾರಾಟ ಎನ್ನುವ ತನಿಖಾ ವರದಿಗೆ ಕನ್ನಡ ಸಾಹಿತ್ಯ ಪರಿಷತ್‌ನ ಬಿ.ಜಿ.ಬಣಕಾರ ದತ್ತಿನಿಧಿ ಪುರಸ್ಕಾರ. ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯಿಂದ ಕೋಮು ಸೌಹಾರ್ದ ಪ್ರಶಸ್ತಿ. ಹಾವೇರಿಯ ಮೂಡಣ ದಿನಪತ್ರಿಕೆಯ ಸಂಪಾದಕ ದಿ. ವಿ.ಎಸ್.ಕಾಶೆಟ್ಟಿ ಪ್ರತಿಭಾ ಪುರಸ್ಕಾರ. ವೃತ್ತಿಚೈತನ್ಯ ರತ್ನ ಪ್ರಶಸ್ತಿ, ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ರಾಜ್ಯಮಟ್ಟದ ವೈಚಾರಿಕ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.

 

ಮಾಲತೇಶ ಅಂಗೂರ

(03 Jul 1969)