About the Author

ಮಾಲ್ಗುಡಿ ಶಿವ ಎಂಬ ನಾಮಧೇಯದೊಂದಿಗೆ ಬರಹ ಕೃಷಿ ನಡೆಸುತ್ತಿರುವ ಶಿವ ಕುಮಾರ್ ರವರು ಮೂಲತಃ ತುಮಕೂರು ಜಿಲ್ಲೆಯ ಸಿದ್ಧಗಂಗೆಯವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂತ್ರಜ್ಞಾನ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸದೊಂದಿಗೆ ವಾಹನೋದ್ಯಮದಲ್ಲಿ ಎರಡು ದಶಕಗಳಿಗೂ ಮೀರಿದ ವೃತ್ತಿ ಜೀವನ ನಡೆಸಿದ್ದಾರೆ. ಅನುವಾದ, ಕವಿತೆ, ಸಣ್ಣ ಕಥೆಗಳು ಮತ್ತು ಹೈಕುಗಳ ರಚನೆಯೊಂದಿಗೆ ಕಂಠದಾನ, ಇತಿಹಾಸ ಹಾಗೂ ವೇದಾಂತ ಇವರ ಆಸಕ್ತಿಯ ವಿಷಯಗಳು. ಹಿಂದಿ, ಪಂಜಾಬಿ ಮತ್ತು ಆಂಗ್ಲ ಭಾಷೆಯ ಅನುವಾದಗಳಲ್ಲಿ ಅಭಿರುಚಿ ಹೊಂದಿರುವ ಇವರ ಚೊಚ್ಚಲ ಕೃತಿ "ಗಡಿ ಪಾಲಾದವರು" ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ಐತಿಹಾಸಿಕ ಕಾದಂಬರಿ.

ಮಾಲ್ಗುಡಿ ಶಿವ