About the Author

ಕವಯತ್ರಿ ಮೀನಾ ಪಾಟೀಲ ಅವರು ಉನ್ನತ ಹುದ್ದೆಯ ಕೆ.ಎ.ಎಸ್ ಅಧಿಕಾರಿ. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು 1967 ಜನವರಿ 28 ರಂದು ಹಾವೇರಿಯಲ್ಲಿ ಜನಿಸಿದರು. ’ಕೋಗಿಲೆಗೆ ಕಲಿಸಲಾರೆ, ಹಕ್ಕಿಗೊಂದಿಷ್ಟು ಜಾಗಬಿಡಿ’ ಅವರ ಕವನ ಸಂಕಲನಗಳಾಗಿದ್ದು, ’ನೂರು ಹನಿ ಒಂದು ಹೂ ಎಂಬ ಹನಿಗವಿತೆಗಳ ಸಂಕಲವನ್ನು ಹೊರತಂದಿದ್ಧಾರೆ. ಕೋಗಿಲೆಗೆ ಕಲಿಸಲಾರೆ ಕವನ ಸಂಕಲನಕ್ಕೆ 'ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಕಲೇಸಂ ಗುಡಿಬಂಡೆ ಪೂರ್ಣಿಮಾ ದತ್ತಿ ಬಹುಮಾನ' ಲಭಿಸಿದೆ.

 

ಮೀನಾ ಪಾಟೀಲ

(28 Jan 1967)