About the Author

ಮೋಳಿ ವರ್ಗೀಸ್- ಹುಟ್ಟಿದ್ದು ಕೇರಳದ ಕಣ್ಣೂರು ಜಿಲ್ಲೆಯ ಕೊಳಕ್ಕಾಡುವಿನಲ್ಲಿ. ಪಿಯುಸಿಯವರೆಗಿನ ವ್ಯಾಸಂಗವು ಕೇರಳದ ಹುಟ್ಟೂರಿನಲ್ಲೇ ಬಿ.ಎ.ಓದಿದ್ದು ಮೈಸೂರಿನ ಟರೇಷಿಯನ್ ಕಾಲೇಜಿನಲ್ಲಿ. ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಎಂ.ಎ ಮಾಡಿದ್ದು, 1989ರಲ್ಲಿ. ಎಂಎಯಲ್ಲಿ ಸಹಪಾಠಿಯಾಗಿದ್ದ ಖ್ಯಾತ ಕತೆಗಾರ, ಅಂಕಣಕಾರ ಅಬ್ದುಲ್ ರಷೀದರೊಂದಿಗೆ ವಿವಾಹ. ಈಗ ಮೈಸೂರಿನ ಬಿ.ಎಡ್.ಕಾಲೇಜಿನಲ್ಲಿ ಇಂಗ್ಲಿಷ್ ಬೋಧಕರಾಗಿದ್ದಾರೆ. ಸಿರೀಸ್ ಮತ್ತು ಅಖಿಲ್ ಎಂಬ ಎರಡು ಮಕ್ಕಳೊಡನೆ ಇವರ ಸಂಸಾರ ಮೈಸೂರಿನಲ್ಲೇ ನೆಲೆಸಿದೆ. ಇವರು ಮಲಯಾಳಂನಿಂದ ಕನ್ನಡಕ್ಕೆ ತಂದ ವೈಕ್ಕಂ ಮಹಮ್ಮದ್ ಬಷೀರರ ಓರ್ಮೆಯುಡೆ ಅರೆಗಳ್ ಎಂಬ ಜೀವನ ಚರಿತ್ರೆಯ ಭಾಗಗಳು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಸುಗತಕುಮಾರಿಯವರ ಮಲಯಾಳಂ ಕವಿತೆಯ ಅನುವಾದವು ಪ್ರಜಾವಾಣಿಯಲ್ಲಿ ಬೆಳಕು ಕಂಡಿದೆ. ದೇವನೂರರ ಕುಸುಮಬಾಲೆ ಮತ್ತು ಅಬ್ದುಲ್ ರಷೀದರ ಕಾದಂಬರಿ ಹೂವಿನಕೊಲ್ಲಿಯನ್ನು ಮಲಯಾಳಂಗೆ ಅನುವಾದಿಸಿದ್ದಾರೆ.

ಮೋಳಿ ವರ್ಗೀಸ್