About the Author

ವೃತ್ತಿಯಿಂದ ವಕೀಲರಾದ ಮುರಲಿಕೃಷ್ಣ ಪಿ. ಬೆಳಾಲು ಅವರು ಪ್ರವೃತ್ತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರು. ಮೂಲತಃ ಉಜಿರೆಯವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು.  ಪ್ರಸ್ತುತ ಬೆಂಗಳೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ವರದಿಗಾರಿಕೆಯಿಂದ 19 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಹೊಸದಿಗಂತ ಪತ್ರಿಕೆಯ ಮೂಲಕ ಪತ್ರಿಕಾರಂಗ ಪ್ರವೇಶಿಸಿದರು.

ಉದಯಭಾನು ಕಲಾಸಂಘದ ಸ್ವರ್ಣ ಮಹೋತ್ಸವದ ಸಂದರ್ಭ ಮಾಧ್ಯಮ ನಿರ್ವಹಣೆ. ‘ಸ್ವರ್ಣ ತಾರೆ ಡಾ.ಬಿ.ಸರೋಜಾದೇವಿ’ - ಜೀವನ ಚಿತ್ರಣ, ‘ಮನದಾಳ’ - ಕವನ ಸಂಕಲನ, ‘ಜೀವದ ಹಣತೆ ಕವನಗಳ ಗುಚ್ಛ’, ‘ಹನಿಮಳೆ ಜಿನುಗುವ ಹನಿಗಳು’- ಹನಿಗವನ ಸಂಕಲನ ಅವರ ಪ್ರಮುಖ ಕೃತಿಗಳು. ‘ಸಪ್ತಸ್ವರ ಭಾವಗಳ ಮಿಲನ’ ಏಳು ಹಾಡುಗಳುಳ್ಳ ಧ್ವನಿಸುರುಳಿ, ‘ರಾಗಾಂತರಂಗ’ - ಎಂಟು ಹಾಡುಗಳುಳ್ಳ ಧ್ವನಿಸುರುಳಿ.  ಅವರ ‘ಸ್ವಾತಂತ್ರ್ಯ ಹೋರಾಟದ ಸಂದರ್ಭ ನಡೆದ ಚೌರಿಚೌರ ಘಟನೆಗೆ ಸಂಬಂಧಿಸಿದ ನಾಟಕ ಬೆಂಗಳೂರು ಆಕಾಶವಾಣಿಯಲ್ಲಿ ರೇಡಿಯೋ ನಾಟಕ ರೂಪದಲ್ಲಿ ಪ್ರಸಾರ’.. ಅಲ್ಲದೆ ‘ಅಂಚೆಚೀಟಿ ಸಂಗ್ರಹ, ನಾಣ್ಯ ಸಂಗ್ರಹ, ವಿಸಿಟಿಂಗ್ ಕಾರ್ಡ್ ಸಂಗ್ರಹ ಹಾಗೂ ಹೂಗಳ ಫೋಟೋಗ್ರಾಫಿ’ ಮುಂತಾದ ಹವ್ಯಾಸಗಳನ್ನು ರೂಢಿಸಿಕೊಂಡು ಬಂದಿದ್ದಾರೆ.

ಮುರಲಿಕೃಷ್ಣ ಪಿ. ಬೆಳಾಲು

Books by Author