About the Author

ಯುವ ಕತೆಗಾರ, ಪ್ರಬಂಧಕಾರ ಮುಸ್ತಾಫ ಕೆ. ಎಚ್. ಹುಟ್ಟಿದ್ದು ಕೊಡಗು ಜಿಲ್ಲೆಯ ಮಾದಾಪುರ ಗ್ರಾಮದಲ್ಲಿ. ಮಂಗಳೂರು ವಿಶ್ವವಿದ್ಯಾಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವೀಧರರು. ಚಿನ್ನದ ಪದಕ ಸಹಿತ ಪ್ರಥಮ ರ್‍ಯಾಂಕ್ ಹಾಗೂ 5 ದತ್ತಿ ನಿಧಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 

ಪ್ರಸ್ತುತ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 'ಕನ್ನಡ ಸಾಹಿತ್ಯ ಸಂಸ್ಕೃತಿ ವಿಮರ್ಶೆ: ಕಿ ರಂ ನಾಗರಾಜ ಮಾದರಿ' ವಿಷಯ ಕುರಿತು ಪ್ರಬಂಧ ಮಂಡಿಸಿ ಪಿ.ಎಚ್.ಡಿ. ಪಡೆದಿದ್ದಾರೆ. 2015ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರ ಪ್ರಕಟಣೆಯಲ್ಲಿ 'ಕಂಡದ್ದು ಕಾಡಿದ್ದು' ಎಂಬ ಲೇಖನಗಳ ಸಂಕಲನ ಪ್ರಕಟವಾಗಿದೆ. 2016ರಲ್ಲಿ ಅಮೇರಿಕಾ ಕನ್ನಡ ಸಂಘ (ಅಕ್ಕ) ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ, ಕ್ರೈಸ್ಟ್ ಯೂನಿವರ್ಸಿಟಿಯ ಬೇಂದ್ರೆ ಕವನ ಸ್ಪರ್ಧೆಗೆ, ಅನಕೃ ಕಥಾಸ್ಪರ್ಧೆಗೆ ಮೂರು ಬಾರಿ ಕಥೆ ಕವನಗಳ ಆಯ್ಕೆ, 2017ರಲ್ಲಿ ಮೈಸೂರು ಅಸೋಸಿಯೇಷನ್ ಮುಂಬೈನ ನೇಸರ ಜಾಗತಿಕ ಕವನ ಸ್ಪರ್ಧೆಯಲ್ಲಿ ಬಹುಮಾನ, 2017ರಲ್ಲಿ ಜನಶಕ್ತಿ ಕಥಾ ಸ್ಪರ್ಧೆಯಲ್ಲಿ ಬಹುಮಾನ, 2018ರ ಸಂಕ್ರಮಣ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ. 2018ರಲ್ಲಿ ಸಿಂಗಾಪುರ ಕನ್ನಡ ಸಂಘದ ಕಥಾ ಸ್ಪರ್ಧೆಯಲ್ಲಿ ಬಹುಮಾನ, 2018ರಲ್ಲಿ ಈ ಹೊತ್ತಿಗೆ ಕಥಾ ಸ್ಪರ್ಧೆಯಲ್ಲಿ ಬಹುಮಾನ, 2019ರಲ್ಲಿ ಮೈಸೂರು ಅಸೋಸಿಯೇಷನ್ ಮುಂಬೈನ ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಬಹುಮಾನ. ಕರಾವಳಿಯ ಲೇಖಕಿಯರ ವಾಚಕಿಯರ ಸಂಘದ ವಿಮರ್ಶೆ ಮತ್ತು ಕವನ ಸ್ಪರ್ಧೆಯಲ್ಲಿ ಬಹುಮಾನ, 2019ರ ಕೋಮುಸೌರ್ಹಾದ ವೇದಿಕೆಯ ಕುವೆಂಪು ವಿಶ್ವಮಾನವ ಪ್ರಬಂಧ ಸ್ಪಧೆಯಲ್ಲಿ ಬಹುಮಾನ, 2020ರಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಪ್ರಬಂಧ ಸರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನ ಪ್ರಬಂಧ ಮಂಡಿಸಿದ್ದು, 2019ರಲ್ಲಿ ಡಾ. ಪ್ರಹ್ಲಾದ್ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ, ಹರಾಂನ ಕಥೆಗಳು ಕೃತಿಗೆ 2020ರ 'ಈ ಹೊತ್ತಿಗೆ' ಕಥಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಸ್ತಾಫ ಕೆ. ಎಚ್.