About the Author

ಲೇಖಕ ಡಾ. ಎನ್.ಎಸ್. ಮಹಾಂತೇಶ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನೆರಳಗುಂಟೆ ಗ್ರಾಮದವರು. ತಂದೆ ಎನ್.ಡಿ. ಶಿವಣ್ಣ ಹಾಗೂ ತಾಯಿ ರೇಣುಕಮ್ಮ. ಕುವೆಂಪು ವಿ.ವಿ.ಯಿಂದ ಎಂ.ಎ (ಇತಿಹಾಸ ಹಾಗೂ ಪ್ರಕ್ತನಾಶಾಸ್ತ್ರ, ಹುಣಸೆಕಟ್ಟೆ ಮನೆತನದ ಶ್ರೀಮತಿ ಶಾರದಾ ಚಂದ್ರಶೇಖರಪ್ಪ ಚಿನ್ನದ ಪದಕದೊಂದಿಗೆ ದ್ವಿತೀಯ ರ್‍ಯಾಂಕ್), ಕನ್ನಡ ವಿ.ವಿ.ಯಿಂದ ಎಂ.ಫಿಲ್ (ವಿಷಯ: ಹೊಸದುರ್ಗ ಪರಿಸರದ ದೇವಾಲಯಗಳು),ಕನ್ನಡ ವಿ.ವಿ.ಯಿಂದ ಪಿಜಿ ಡಿಪ್ಲೊಮಾ (ವಿಷಯ: ಹೊಸದುರ್ಗ ತಾಲೂಕಿನ ಶಾಸನಗಳು), ಕನ್ನಡ ವಿ.ವಿ. ಯಿಂದ ಹೊಸದುರ್ಗ ತಾಲೂಕು ಪರಿಸರ: ಸಾಂಸ್ಕೃತಿಕ ಅಧ್ಯಯನ’ ವಿಷಯವಾಗಿ (2013) ಪಿಎಚ್ ಡಿ. ಪದವೀಧರರು.   

ಇತಿಹಾಸ, ಪ್ರಾಗೈತಿಹಾಸ, ಶಾಸನ, ಹಸ್ತಪ್ರತಿ, ನಾಣ್ಯ, ಶಿಲ್ಪ, ವಾಸ್ತಶಿಲ್ಪ ಅಧ್ಯಯನ ಇವರ ಹವ್ಯಾಸ. ಚಳ್ಳಕೆರೆ ಹಾಗೂ ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಂತರ ದಾವಣಗೆರೆ ವಿ.ವಿ. ಇತಿಹಾಸ ಅಧ್ಯಯನ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶಕರೂ ಆಗಿದ್ದು, ಕರ್ನಾಟಕ ಇತಿಹಾಸ ಅಕಾಡೆಮಿ, ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ಹಾಗೂ ಚಿತ್ರದುರ್ಗ ಇತಿಹಾಸ ಕೂಟ ಸಂಸ್ಥೆಗಳ ಸದಸ್ಯರಾಗಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸುಮಾರು 50 ಸಂಶೋಧನ ಲೇಖನಗಳು ಪ್ರಕಟವಾಗಿವೆ.  ಗತಕಥನ ( ಸಂಶೋಧನ ಅರ್ಧವಾರ್ಷಿಕ ) ಇತಿಹಾಸ, ಪುರಾತತ್ವ ಮತ್ತು ಸಂಸ್ಕೃತಿ ಕುರಿತ  ನಿಯತಕಾಲಿಕೆಯ ಸಂಪಾದಕರು.  

`ಡಬಲ್ ಕ್ರಾಸ್' ಕಿರುಚಿತ್ರದಲ್ಲಿ ನಟನೆ, ಯೂಟಿಎನ್ ಮೀಡಿಯಾ ಯೂಟ್ಯೂಬ್ ಚಾನೆಲ್ ನಲ್ಲಿ ಸಂಪನ್ಮೂಲ ಮುಖ್ಯಸ್ಥರಾಗಿ ಸೇವೆ, ಕರ್ನಾಟಕ ಶಾಸ್ತ್ರೀ ಸಂಗೀತ ಗಾಯಕರು ಹಾಗೂ ಸುಮಾರು 40ಕ್ಕೂ ಅಧಿಕ ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. 

ಕೃತಿಗಳು: ಚಿತ್ರದುರ್ಗ ಕೋಟೆ ಪರಿಸರದ ದೇವಾಲಯಗಳು: ಒಂದು ಸಾಂಸ್ಕೃತಿಕ ಅಧ್ಯಯನ, ಇತಿಹಾಸ ಮತ್ತು.... ( ಡಾ.ಎಂ.ಎಂ.ಕಲಬುರ್ಗಿ ಅವರ ಇತಿಹಾಸ ಸಂಶೋಧನ ಲೇಖನ ಸಂಪುಟ) , ಪ್ರಕೃತಿ ಪರದೇಶಿ ಶ್ರೀಗುರು ಗೋಣಿಬಾಬ ಅವರ ಚರಿತ್ರೆ ಹಾಗೂ ಕಾಲಜ್ಞಾನ ಸಾಹಿತ್ಯ, ಎಸ್.ಆರ್.ಗುರುನಾಥ್ ಸಾಹಿತ್ಯ ಮತ್ತು ಸಂಶೋಧನೆ. 

 

ಎನ್. ಎಸ್. ಮಹಂತೇಶ

(05 Feb 1984)