About the Author

ಎನ್. ಶ್ರೀಧರ ಇವರು ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಕಂದಾವರ ಗ್ರಾಮದಲ್ಲಿ 14-04-1967 ರಂದು ಜನಿಸಿದರು.  ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ವಾಣಿಜ್ಯ, ಔದ್ಯೋಗಿಕ ಸಂಬಂಧ-ಸಿಬ್ಬಂದಿ ನಿರ್ವಹಣೆ ಹಾಗು ಕಾನೂನು ವಿಷಯಗಳಲ್ಲಿ ಶಿಕ್ಷಣ ಪಡೆದಿದ್ದಾರೆ.  ವಿ.ವಿ.ಗಿರಿ ನ್ಯಾಷನಲ್ ಲೇಬರ್ ಇನ್ಸ್ಟಿಟ್ಯೂಟ್, ನೊಯ್ದಾ (ಉ.ಪ್ರ.) ಹಾಗು ಚಂಡೀಘರ್ ಜುಡಿಷಿಯಲ್ ಅಕಾಡೆಮಿಯಲ್ಲಿ ತರಬೇತಿ ಹೊಂದಿದ್ದಾರೆ. ಭಾರತ ಸರಕಾರದ ಕಾರ್ಮಿಕ ಇಲಾಖೆಯಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಮಹಾರಾಷ್ಟ್ರದ ಪುಣೆಯಲ್ಲಿ ಸದ್ಯ ವಾಸವಾಗಿದ್ದಾರೆ. ಮುಂಬೈ ಕನ್ನಡ ಸಂಘದವರು ನಡೆಸಿದ ರಾಷ್ಟ್ರೀಯ ಕವನ ಸ್ಪರ್ಧೆಯಲ್ಲಿ ಇವರ ‘ಹ್ಯಾಲೆ ಬಂದಾಗ’ ಕವನವು ಮೆಚ್ಚುಗೆಗಳಿಸಿತ್ತು. ಡಾ. ಎಚ್.ಎಸ್ .ವೆಂಕಟೇಶಮೂರ್ತಿಯವರ ನೇತೃತ್ವದಲ್ಲಿ ಬೆಂಗಳೂರಿನ ಸಂತ ಜೋಸೆಫ್ ಕಾಲೇಜಿನವರು ಏರ್ಪಡಿಸಿದ್ದ ರಾಜ್ಯ ಮಟ್ಟದ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಇವರ ‘ಭೋಜನ ಪುರಾಣ’ಕ್ಕೆ  ಪ್ರಥಮ ಬಹುಮಾನ ದೊರೆತಿದೆಯಲ್ಲದೆ ಪ್ರಬಂಧ ಸಂಕಲನವಾಗಿಯೂ ಪ್ರಕಾಶಿತಗೊಂಡಿದೆ.  ಇವರ ಅನೇಕ ಬರಹಗಳು ಮಲ್ಲಿಗೆ, ಮಯೂರ, ಕರ್ಮವೀರ, ತುಷಾರ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಗುಜರಾತಿನ ಅಹಮದಾಬಾದಿನಲ್ಲಿ ಕನ್ನಡ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಮತ್ತು ಗುಜರಾತಿನ, ಕಚ್ಛ್ ಜಿಲ್ಲೆಯ ಗಾಂಧಿಧಾಮದಲ್ಲಿ ಕನ್ನಡ ಸಂಘವನ್ನು ಹುಟ್ಟುಹಾಕುವುದರಲ್ಲಿ ಸ್ಥಾಪಕ  ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಎನ್. ಶ್ರೀಧರ

(14 Apr 1967)