About the Author

ಕರ್ನಾಟಕ ಮಕ್ಕಳ ಹಕ್ಕು ನಿಗಾ ಕೇಂದ್ರದ ರಾಜ್ಯ ಸಂಯೋಜಕ, "ಚೈಲ್ಡ್‌ ರೈಟ್ಸ್‌ ಟ್ರಸ್ಟ್” ಮಕ್ಕಳ ಹಕ್ಕುಗಳ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮಾ ಜನಿಸಿದ್ದು 1965 ನವೆಂಬರ್ 11ರಂದು. ಮೂಲತಃ ಮೈಸೂರಿನವರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಮೂರು ದಶಕಗಳಿಂದ ಸಮಾಜಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, "ಆಕೆ ಮಕ್ಕಳನ್ನು ರಕ್ಷಿಸಿದವಳು: ಎಗ್ಲಾಂಟೆನ್‌ ಜೆಬ್‌" ಜೀವನ ಕಥನವನ್ನುಬರೆದಿದ್ದಾರೆ. 

ಎನ್.ವಿ. ವಾಸುದೇವ ಶರ್ಮಾ