About the Author

ಹಾಸ್ಯ ಬರಹಗಾರ ನಾಡಿಗೇರ ಕೃಷ್ಣರಾವ್ ಅವರು ಬಹುಮುಖ ಪ್ರತಿಭೆಯವರು. ಇವರು ಹುಟ್ಟಿದ್ದು ಹರಿಹರದಲ್ಲಿ (ಜನನ: 25-03-1908) ತಂದೆ ದತ್ತಾತ್ರೇಯ ರಾಯರು, ತಾಯಿ ಕಾಂಚಮ್ಮ. ತಂದೆಗೆ ನಾಟಕದ ಗೀಳು, ಜೊತೆಗೆ ಸಾಹಿತ್ಯದ ದಿಗ್ಗಜರುಗಳಾದ ಹರ್ಡೇಕರ್‌ಮಂಜಪ್ಪ, ಗಳಗನಾಥ, ಹೊಸಕೆರೆ ಚಿದಂಬರಯ್ಯ, ಕುಕ್ಕೆಸುಬ್ರಹ್ಮಣ್ಯ ಶಾಸ್ತ್ರಿಗಳ ಒಡನಾಟದಿಂದ ಸಾಹಿತ್ಯದಲ್ಲಿ ಆಸಕ್ತಿ. ಎರಡು ಬಾರಿ ಪಪರೀಕ್ಷೆ ನೀಡಿದರೂ 9ನೇ ತರಗತಿ ಪಾಸಾಗಲಿಲ್ಲ. ಆದರೆ, ಇವರ ಮಾತಿಗೆ ಜನ ಖುಷಿ ಪಡುತ್ತಿದ್ದರು. 

ನಾಡಿಗೇರ್ ಕಿಟ್ಟಿ ಎಂದೇ ಪ್ರಸಿದ್ಧಿ. ವಿದ್ಯೆಗೆ ಶರಣು ಹೊಡೆದು ಜವಳಿ ಅಂಗಡಿ ಗುಮಾಸ್ತರಾಗಿದ್ದರು. ಹೋಟೆಲ್ ನಲ್ಲಿ ಕೆಲಸ ಮಾಡಿದರು.  ಭದ್ರಾವತಿ – ನರಸಿಂಹರಾಜ ಪುರದಲ್ಲಿ ದಿನಗೂಲಿ ಮಾಡಿ, ಲಕ್ಕವಳ್ಳಿ ಇದ್ದಿಲು ಸುಡುವ ಕಡೆ ಮೇಲ್ವಿಚಾರಕರಾಗಿ, ಶಾನುಭೋಗರಾಗಿ ಹೀಗೆ  ಏನೇನೋ ಆಗಿ ಕೊನೆಗೆ ಪತ್ರಿಕೋದ್ಯಮ ಸೇರಿ ಹಲವಾರು ಸಣ್ಣ -ದೊಡ್ಡ ಪತ್ರಿಕೆಗಳ ಸೂತ್ರ ಹಿಡಿಯುವಷ್ಟು ಪ್ರಭಾವಿತರಾದರು. ಅನಕೃ ಒಡನಾಟವಿತ್ಬೆಂತು. ಜಿ. ನಾರಾಯಣ ಅವರ ‘ವಿನೋದ’ ಹಾಸ್ಯಪತ್ರಿಕೆಗೆ ಹಾಸ್ಯಲೇಖನಗಳನ್ನು ಬರೆದರು. 

‘ನಾಡಿಗೇರರ ನಗೆ ಬರಹಗಳು’ ಎಂಬ ಮೂರು ಹಾಸ್ಯಕೃತಿಗಳಾಗಿವೆ. ನಗೆಯ 13 ಹಾಸ್ಯ ಸಂಕಲನಗಗಳು ಪ್ರಕಟವಾಗಿವೆ. ಪ್ರಣಯ ಕೋಲಾಹಲ’ ಮತ್ತು ‘ತವರಿಗೆ ಬಂದ ಹೆಣ್ಣು ಮಕ್ಕಳು’ -ಹಾಸ್ಯಕಾದಂಬರಿಗಳು. ‘ರನ್ನಗನ್ನಡಿ’ ಕಥಾಸಂಕಲನ. ‘ಪ್ರಣಯಕಥೆಗಳು’ (ಅನುವಾದ), ರಾಷ್ಟ್ರಪತಿ ವಿ.ವಿ. ಗಿರಿ (ಜೀವನ ಚರಿತ್ರೆ), ಶ್ರೀ ಹರಿಹರ ಕ್ಷೇತ್ರ (ಕ್ಷೇತ್ರ ಪರಿಚಯ), ಪುಢಾರಿ ಪುಟ್ಟಯ್ಯ (ಹಾಸ್ಯನಾಟಕ) ಮತ್ತು ಎದಿರೇಟು, ರಾಜಾರಾಣಿ ಗುಲಾಮ, ಮೂರಕ್ಕೆ ಮುಕ್ತಿ, ಗಗನ ಚಂದಿರ, ಅದಲುಬದಲು ಹೀಗೆ 42 ಸಾಮಾಜಿಕ ಕಾದಂಬರಿಗಳೂ ಸೇರಿ ಒಟ್ಟು 67 ಕೃತಿಗಳನ್ನು ರಚಿಸಿದ್ದಾರೆ.  ಸಿ.ವಿ. ರಾಜುರವರು ನಿರ್ಮಿಸಿದ ‘ನಟ ಶೇಖರ’ ಚಿತ್ರಕ್ಕೆ ಸಂಭಾಷಣೆ ಮತ್ತು 15 ಹಾಡುಗಳನ್ನು ಬರೆದರು. ಭಕ್ತಮಲ್ಲಿಕಾರ್ಜುನ ಚಿತ್ರಕ್ಕೆ 8 ಹಾಡುಗಳನ್ನು ಬರೆದರು.ಲವ-ಕುಶ ಚಿತ್ರಕ್ಕೆ ಹಾಡು, ಸಾಹಿತ್ಯದ ಜೊತೆಗೆ ನಿರ್ದೇಶನದ ಹೊಣೆಯನ್ನು ಸಿ.ವಿ.ರಾಜು ರವರು ವಹಿಸಿದರಾದರೂ ಚಿತ್ರಸೆಟ್ಟೇರಲೇ ಇಲ್ಲ.  ನಗೆಬುಗ್ಗೆ, ಗೋವಿಂದರಾಯರ ಬರಹಗಳು, ಗೋವಿಂದರಾಯನ ಗೋತಾ ಮುಂತಾದವು. ಮಾಧುಗೇರ್ ಬರೆದದ್ದು ಮಕಮಲ್ ಚೂರಿ ಹಾಸ್ಯ ಸಂಕಲನವಾದರೆ ಅಶ್ರುಧಾರಾ ಕಾದಂಬರಿ. ಇವರ ಅಭಿನಂದನ ಗ್ರಂಥ ‘ನಾಡಿಗೇರ್‌’ (1972)ನಾಡಿಗೇರರ ಆಯ್ದ ನಗೆ ಬರಹಗಳು (2000) ಮತ್ತು 2007 ರಲ್ಲಿ ಬೆಸ್ಟ್ ಆಫ್‌ನಾಡಿಗೇರ್ ಪ್ರಕಟವಾಗಿವೆ. ಇವರು 13-03-1992 ರಂದು ನಿಧನರಾದರು. 

ನಾಡಿಗೇರ ಕೃಷ್ಣರಾವ್

(25 Mar 1908-13 Mar 1992)