About the Author

ಖ್ಯಾತ ರಂಗ ನಿರ್ದೇಶಕ, ನಾಟಕಕಾರ ನಟರಾಜ್ ಹೊನ್ನವಳ್ಳಿ ಅವರು ರಂಗಭೂಮಿಯಲ್ಲಿ ಹಲವು ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದ್ದಾರೆ. ಇವರ ಕಲಾಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ವಿಶ್ವ ರಂಗಭೂಮಿ ದಿಗ್ಗಜರಾದ ಬ್ರೆಕ್ ಹಾಗೂ ಚಾಕೊ ಮತ್ತಿತರರ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಂಕೇಶ್ ಅವರ ಬದುಕು, ಶಂಕರ ಮೊಕಾಶಿ ಪುಣೇಕರ್ ಅವರ ನಟ ನಾರಾಯಣಿ, ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್, ಮಾಸ್ತಿಯವರ ಸುಬ್ಬಣ್ಣ ಕಾದಂಬರಿಗಳನ್ನು ರಂಗರೂಪಕ್ಕೆ ತಂದಿದ್ದಾರೆ. ನಲವತ್ತು ನಾಟಕ, ನಲವತ್ತು ಕಥೆಗಳನ್ನು ರಂಗಕ್ಕೆ ಅಳವಡಿಸಿದ್ದಾರೆ. ಕನ್ನಡದ ಸಣ್ಣ ಕಥೆಗಳನ್ನು ರಂಗಕ್ಕೆ ತಂದ ಯಶಸ್ವಿ ನಿರ್ದೇಶಕರೆನಿಸಿಕೊಂಡಿದ್ದಾರೆ.

ನೀನಾಸಂ ರಂಗಶಿಕ್ಷಣದ ನಂತರ ಅವರು ಗೆಳೆಯರೊಂದಿಗೆ ಸೇರಿ ತಿಪಟೂರಿನಲ್ಲಿ ಪ್ರೊಥಿಯೋ ಎಂಬ ವೃತ್ತಿಪರ ರಂಗ ತಂಡ ಕಟ್ಟಿದ್ದರು. ಅಗ್ರಿಕಲ್ಚರಲ್ ಥಿಯೇಟರ್ ಲ್ಯಾಬ್ ತರಹದ ರಂಗ ಪ್ರಯೋಗ ನಡೆಸುತ್ತಿರುವ ರಂಗ ಸಂಶೋಧಕರು. ಸಾಹಿತ್ಯ, ರಂಗಭೂಮಿ ಪ್ರಯೋಗಗಳನ್ನು ಭಾಷೆಯ ಗಡಿ ದಾಟಿ ಬೆಳೆಸಲು ಪ್ರಯತ್ನಶೀಲರಾಗಿದ್ದಾರೆ. ರಾಷ್ಟ್ರೀಯ ರಂಗ ತಿರುಗಾಟಗಳನ್ನು ಕೈಗೊಂಡಿದ್ದಾರೆ. ಪ್ರಸ್ತುತ ಇವರು ಸಾಣೇಹಳ್ಳಿ ಶಿವಕುಮಾರ ರಂಗ ಪ್ರಯೋಗ ಶಾಲೆಯ ಪ್ರಾಂಶುಪಾಲರು. ಡಾ.ಶಂಕರ ಮೊಕಾಶಿ ಪುಣೇಕರರ ನಟ ನಾರಾಯಣಿ ಕಾದಂಬರಿಯಾಧಾರಿತ ನಾಟಕ ಅಭಿನವ ಬೃಹನ್ನಳಾ ವಿಳಾಸವನ್ನು ಲೇಖಕ ಎಚ್.ವಿ. ವೇಣುಗೋಪಾಲ್ ಅವರೊಂದಿಗೆ ಸೇರಿ ಪ್ರಕಟಿಸಿದ್ದಾರೆ.

ನಟರಾಜ್ ಹೊನ್ನವಳ್ಳಿ