About the Author

ಲೇಖಕ, ವಿಮರ್ಶಕ ಡಾ. ನಟರಾಜ ತಲಘಟ್ಟಪುರ ಅವರು ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರದವರು. ಬೆಂಗಳೂರು ವಿ.ವಿ.ಯಿಂದ ಎಂ.ಎ. (ಕನ್ನಡ-ಚಿನ್ನದ ಪದಕದೊಂದಿಗೆ), ಗಿರೀಶ್ ಕಾರ್ನಾಡರ ನಾಟಕಗಳು - ಒಂದು ಅಧ್ಯಯನ ವಿಷಯವಾಗಿ ಎಂ.ಫಿಲ್, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಸನ ಶಾಸ್ತ್ರ ಪ್ರವೇಶ ಹಾಗೂ ಶಾಸನ ಶಾಸ್ತ್ರ ಪ್ರೌಢ ಡಿಪ್ಲೊಮಾ, ಬೆಂಗಳೂರಿನ ಭಾರತೀಯ ವಿದ್ಯಾಭವನದಿಂದ ಪಿಜಿಡಿಕೆಜೆ (ಕನ್ನಡ ಪತ್ರಿಕೋದ್ಯಮ), ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ ಹಂಪಿ ಆಧುನಿಕ ಕನ್ನಡ ನಾಟಕಗಳ ಸಾಂಸ್ಕೃತಿಕ ಅಧ್ಯಯನ’  (ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ಪ್ರಸನ್ನ, ಎಚ್.ಎಸ್. ಶಿವಪ್ರಕಾಶ್, ಹಾಗೂ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ನಾಟಕಗಳನ್ನು ಅನುಲಕ್ಷಿಸಿ) ವಿಷಯವಾಗಿ ಪಿಎಚ್.ಡಿ. ಪದವೀಧರರು. ಸದ್ಯ, ಬಿ.ಎನ್.ಎಂ. ಪದವಿ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರು.

ಕೃತಿಗಳು : ಬಣ್ಣ ಮೆಚ್ಚಿದವರು (ನಾಟಕ- 2013), ಯಶೋಧರನ ಸ್ವಗತ (ನಾಟಕ-2014), .ಬೇರಿನೊಳಗಿನ ಬೆಳಕು (ವಿಮರ್ಶೆ-2014 ), ಗುರುತಿನ ದೀವಟಿಗೆ (ವಿಮರ್ಶೆ2016), ಸಾವಿರದ ರಾತ್ರಿ (ನಾಟಕ-2016), ಪ್ರಗತಿ (ಅನುವಾದ ನಾಟಕ- 2016), (ಮೂಲ: ಸೆಂಟ್ ಜಾನ್ ಎರ್ವಿನ್) ಹೊಗೆಯಾಡದ ಬೆಂಕಿ (ಕವನ ಸಂಕಲನ 2016), ಒಳದನಿ (ಕವನ ಸಂಕಲನ) 

ಪ್ರಶಸ್ತಿ-ಪುರಸ್ಕಾರಗಳು: ಬೆಂಗಳೂರಿನ ಕ್ರೈಸ್ತ ಕಾಲೇಜಿನ ಕನ್ನಡ ಸಂಘದಿಂದ ಬೇಂದ್ರೆ ಕಾವ್ಯ ಪುರಸ್ಕಾರ, ಯಶೋಧರ ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿ ನಗದು ಪುರಸ್ಕಾರ ಸಾವಿರದ ರಾತ್ರಿ ನಾಟಕಕ್ಕೆ ಉಡುಪಿ ರಂಗಭೂಮಿ ಡಾ. ಎಚ್. ಶಾಂತಾರಾವ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆಯ ಪುರಸ್ಕಾರ, ಗುರುತಿನ ದೀವಟಿಗೆ ಕೃತಿಗೆ - ಸೊ.ವೆಂ ಅರಗ ವಿಮರ್ಶಾ ಪುರಸ್ಕಾರ, ಬಿ.ಎಂ.ಶ್ರೀ ಪ್ರತಿಷ್ಠಾನ ಗುರುತಿನ ದೀವಟಿಗೆ ಕೃತಿಗೆ - ಮುದ್ದಣ್ಣ-ರತ್ನಾಕರವರ್ಣಿ ದತ್ತಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಗುರುತಿನ ದೀವಟಿಗೆ ಕೃತಿಗೆ -ಬುದ್ಧ ಬಸವ ಗಾಂಧಿ ಟ್ರಸ್ಟ್ ನ ಪುಸ್ತಕ ಬಹುಮಾನ, ಹೊಗೆಯಾಡದ ಬೆಂಕಿ ಕೃತಿಗೆ - ಅಡೈಸರ್ ಪ್ರಶಸ್ತಿ ಅಡೈಸರ್ ಪತ್ರಿಕೆ, ಮಂಡ್ಯ ಕುವೆಂಪು ಸಾಹಿತ್ಯ ರತ್ನ ಪ್ರಶಸ್ತಿ ಕನ್ನಡ ಸಾಹಿತ್ಯ ಸೇವಾರತ್ನ ಪ್ರಶಸ್ತಿ 'ಬಯಲ ರೂಪ' ನಾಟಕಕ್ಕೆ ವಚನ ಚಳವಳಿ ಕುರಿತ ರಾಜ್ಯ ಮಟ್ಟದ ನಾಟಕ ರಚನಾ ಸ್ಪರ್ಧೆಯ ಬಹುಮಾನ (ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು)

 

ನಟರಾಜ ತಲಘಟ್ಟಪುರ

(07 Oct 1967)