ಕವಯತ್ರಿ, ಮಕ್ಕಳ ಸಾಹಿತ್ಯಗಾರ್ತಿ, ಕಾದಂಬರಿಗಾರ್ತಿ ನೀಲಗಂಗವ್ವ ಸಿದ್ದರಾಮಯ್ಯ ಚರಂತಿಮಠ ಅವರ ಕಾವ್ಯನಾಮ ನೀಲಗಂಗಾ. ಅವರು 1946 ಫೆಬ್ರವರಿ 03 ರಂದು ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ಜನಿಸಿದರು. “ಗೀತ ಬಸವ, ಹೂವ ಚಲ್ಲಾವ, ಸಾವು ಗರ್ಭ ಧರಿಸಿತು, ಜಗದಗಲ ಮುಗಿಲಗಲ” ಅವರ ಪ್ರಮುಖ ಕವನ ಸಂಕಲನಗಳು. “ದೇವ ಮಂದಿರ, ಮೌನ ಸ್ಪಂದನ,
ಖಾಲಿಮನೆ, ಸಂಗ್ರಾಮ” ಇತ್ಯಾದಿ ಕಥಾಸಂಕಲನಗಳನ್ನು ರಚಿಸಿದ್ದಾರೆ. “ಆತ್ಮ ಯಾವ ಕುಲ ಜೀವಯಾವಕುಲ” ಅವರ ಪ್ರಮುಖ ಕಾದಂಬರಿ. “ಎಚ್ಚರ! ಪಯಣಿಗ, ಗೆಳೆಯ, ಬೆಳಕಿನೆಡೆಗೆ, ಮನೆ ಮಡದಿ ಮಕ್ಕಳು, ಧೂಮಪಾನ ಮದ್ಯಪಾನ, ನೀರು, ಅರಣ್ಯ , ಮಾಲಿನ್ಯ, ವೀರ ರಾಣಿ ಕಿತ್ತೂರ ಚೆನ್ನಮ್ಮ, ಜಾತ್ರೆ ಮುಂತಾಧ ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ. ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಕ.ಸಾ.ಪ.ದ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ವಿಶ್ವನಾಥವಾರಂಬಳ್ಳಿ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಸದ್ಭಾವನಾ ಪ್ರಶಸ್ತಿ, ರಾಷ್ಟ್ರಕೂಟ ಸಾಹಿತ್ಯಶ್ರೀ ಇತ್ಯಾದಿ ಪ್ರಶಸ್ತ್ರಿಗಳು ದೊರೆತಿದೆ.