About the Author

ಲೇಖಕಿ ಡಾ. ನೀತಾ. ರಾವ್ ಅವರು ಮೂಲತಃ ಬೆಳಗಾವಿಯವರು. ಚಿಕ್ಕ ವಯಸ್ಸಿನಿಂದ ಸಾಹಿತ್ಯದ ಓದು ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡ ನೀತಾ ಅವರು ಪಿಯುಸಿಯಲ್ಲಿ ರಾಜ್ಯಕ್ಕೆ ಒಂಬತ್ತನೇ ರ್ಯಾಂಕ್ ಪಡೆದು ನಂತರ ಬಿ.ಕಾಂ. ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎರಡನೇ ಸ್ಥಾನ ಪಡೆದು ಉತ್ತೀರ್ಣರಾಗಿ ಎಂ.ಕಾಮ್. ನಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಆನಂತರ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಆರು ವರ್ಷ ಕೆಲಸ ಮಾಡಿ ನಂತರ ಸ್ಥಳೀಯ ರಾಣಿ ಚನ್ನಮ್ಮ ಮಹಿಳಾ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಎಂಟು ವರ್ಷ ಕೆಲಸ ಮಾಡಿದ್ದಾರೆ. ನಂತರದಲ್ಲಿ ಮೂರು ವರ್ಷಗಳ ಕಾಲ ಮ್ಯೂಚುವಲ್ ಫಂಡ್ ಮತ್ತು ಇನ್ಶುರೆನ್ಸ್ ಎಡ್ವೈಸರ್ ಆಗಿ ಕೆಲಸ ಮಾಡಿದ್ದಾರೆ. ಮುಂದೆ ತಮ್ಮಿಷ್ಟದ ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಅವರು ಹತ್ತು ವರ್ಷಗಳ ಕಾಲ ಕಾಲೇಜುಗಳಲ್ಲಿ ಲೆಕ್ಚಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆನಂತರದಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪಿಎಚ್. ಡಿ. ಮಾಡಿ ಪ್ರಸ್ತುತ ಬೆಳಗಾವಿಯ ಗೋಗ್ಟೆ ಮಹಾವಿದ್ಯಾಲಯದ ಎಂ.ಕಾಮ್. ವಿಭಾಗದಲ್ಲಿ ಪ್ರೊಫೆಸರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಮೆಂಬರ್ ಆಗಿ ನಾಮನಿರ್ದೇಶನಗೊಂಡಿದ್ದು ಬೆಳಗಾವಿಯಲ್ಲಿಯೇ ನೆಲೆನಿಂತಿದ್ದಾರೆ. 

ರಾಜ್ಯದ ಅನೇಕ ಪತ್ರಿಕೆಗಳಿಗೆ ಲೇಖನಗಳು, ಪ್ರಬಂಧಗಳು, ಮತ್ತು ಕಥೆಗಳನ್ನು ಬರೆದಿದ್ದಾರೆ. "ಅಂತಃಪುರ" (ಅಂಕಣ ಬರಹಗಳ ಸಂಕಲನ) ಹಾಗೂ "ಹತ್ತನೇ ಕ್ಲಾಸಿನ ಹುಡುಗಿಯರು" (ಲಲಿತ ಪ್ರಬಂಧಗಳು) ಇವೆರಡೂ ಪ್ರಕಟಿತ ಪುಸ್ತಕಗಳು. ಹತ್ತನೇ ಕ್ಲಾಸಿನ ಹುಡುಗಿಯರು ಈ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ ಬಂದಿದೆ.

ನೀತಾ ರಾವ್

(28 Oct 1967)

Awards