About the Author

ಡಾ. ಎನ್. ಚಂದ್ರೇಗೌಡ ಅವರ ಹುಟ್ಟೂರು ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ನಿಂಬೇಹಳ್ಳಿ. ತಂದೆ: ನಂಜೇಗೌಡ, ತಾಯಿ: ನಂಜಮ್ಮ. ನಿಂಬೇಹಳ್ಳಿ, ದಿಡಗ, ಹಿರಿಸಾವೆ, ಚನ್ನರಾಯಪಟ್ಟಣ, ತುಮಕೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಎಂ.ಎ., ಪಿಎಚ್.ಡಿ., ಪದವಿ ಪಡೆದರು. ಮುಖ್ಯಶಿಕ್ಷಕ, ಬಿ.ಇ.ಓ., ಬಿ.ಇಡಿ. ಕಾಲೇಜಿನಲ್ಲಿ ಉಪನ್ಯಾಸಕ, ಡಿ.ಡಿ.ಪಿ.ಐ., ಮುಂತಾದ ಹಲವು ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕನ್ನಡ ಭಾಷಾ ಸಂಪನ್ಮೂಲ ವ್ಯಕ್ತಿ. ಇತಿಹಾಸ ಮತ್ತು ಭಾಷಾ ಸಂಶೋಧನಾ ಕಾರ್ಯದಲ್ಲಿ ಆಸಕ್ತಿ, ಸಣ್ಣಕಥೆಗಾರ, ನಾಟಕಕಾರ, ಕಾದಂಬರಿಕಾರ, ಕವಿ.

ಕೃತಿಗಳು: ಪ್ರೀತಿಯ ಪರಿವರ್ತನೆ' (ಕಥಾಸಂಕಲನ); 'ಪ್ರೇಮಪೂಜೆ' (ಕವನ ಸಂಕಲನ); 'ಸೀತೆಯ ಸೆರಗು', 'ಪ್ರೀತಿಸಿದವರು' (ಕಾದಂಬರಿಗಳು), 'ಪ್ರತಿಫಲ', 'ದುಂಬಿ ಹೇಳಿದ ಕಥೆ' (ನಾಟಕಗಳು); 'ಚನ್ನರಾಯಪಟ್ಟಣ ತಾಲ್ಲೂಕಿನ ಸ್ಥಳನಾಮಗಳ ಅಧ್ಯಯನ' ಪಿಎಚ್.ಡಿ. ಪ್ರಬಂಧ; “Listening', “Quality In Education' (ಶೈಕ್ಷಣಿಕ ಕೃತಿಗಳು). 'ಸಮಾಜವಾದಿ ಹೋರಾಟಗಾರ ಎಸ್. ಶಿವಪ್ಪ' ಇವರ ಈಚಿನ ಕೃತಿ.

ನಿಂಬೇಹಳ್ಳಿ ಚಂದ್ರಶೇಖರ್‌

(20 Jun 1956)