About the Author

ಲೇಖಕ ನಿರಂಜನ ತೋಟದಮನೆ (ಎನ್.ಎಸ್. ಗಾಣಿಗರ) ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮಸಾಗರದವರು. ಕೃಷಿ, ಕಾವ್ಯ ವಿಮರ್ಶೆ, ಕಥೆ ಮತ್ತು ರಂಗಭೂಮಿ ಇವರ ಆಸಕ್ತಿ. ಕುವೆಂಪು ವಿವಿಯಲ್ಲಿ ಕನ್ನಡ ಎಂ.ಎ, ರಂಗಮಾಧ್ಯಮದಲ್ಲಿ ಡಿಪ್ಲೊಮಾ ಹಾಗೂ ಬಿ.ಇಡಿ ಪದವೀಧರರು. ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ‘ಆಧುನಿಕ ಕನ್ನಡ ಕಾವ್ಯದಲ್ಲಿ ಕನಸಿನ ಪ್ರತಿನಿಧೀಕರಣ (ಬೇಂದ್ರೆ, ಕುವೆಂಪು ಮತ್ತು ಮಧುರಚೆನ್ನರ ಕಾವ್ಯವನ್ನು ಅನುಲಕ್ಷಿಸಿ)’ ಪಿ.ಎಚ್.ಡಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವೀಧರರು. ಸದ್ಯ ಅಜೀಮ್ ಪ್ರೇಮ್‌ಜಿ ಫೌಂಡೇಷನ್, ಕಲಬುರಗಿಯಲ್ಲಿ ಕನ್ನಡ ತಂಡದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 ಕೃತಿಗಳು: ಬಲೆಗೆ ಎರಚಿದ ಬಣ್ಣ

ಪ್ರಶಸ್ತಿ-ಪುರಸ್ಕಾರಗಳು: ‘ಪ್ರಜಾವಾಣಿ ದೀಪಾವಳಿ ಕಾವ್ಯ ಪ್ರಶಸ್ತಿ‘, 5 ಬಾರಿ ಕ್ರಿಸ್ಟ್ ವಿಶ್ವವಿದ್ಯಾಲಯ ನೀಡುವ ‘ಬೇಂದ್ರೆ ಸ್ಮೃತಿ’ ಕಾವ್ಯ ಪ್ರಶಸ್ತಿ, 2 ಬಾರಿ ‘ಸಂಕ್ರಮಣ ಕಾವ್ಯ ಪ್ರಶಸ್ತಿ’, ‘ಸಂಚಯ ಕಾವ್ಯ ಪ್ರಶಸ್ತಿ’, ‘ಗೌತಮ್ ಪ್ರಕಾಶನ’ ಕಾವ್ಯ ಪ್ರಶಸ್ತಿ ಮತ್ತು ಕನ್ನಡ ವಿಜ್ಞಾನ ಸಮ್ಮೇಳನ ಸ್ವದೇಶ್ ಇವರ ‘ಅತ್ಯುತ್ತಮ ಪ್ರಬಂಧ ಮಂಡನಾ ಪ್ರಶಸ್ತಿ'. ಶಿವಮೊಗ್ಗ ಕನ್ನಡ ಸಂಘದ ಅಂತರಕಾಲೇಜು ಕಥಾಸ್ಪರ್ಧೆಯಲ್ಲಿ ‘ಗೌರಿ ಎಂಬ ನೆನಪು’ ಕಥೆಗೆ ಬಹುಮಾನ ಲಭಿಸಿದೆ.

 

ನಿರಂಜನ ತೋಟದಮನೆ