About the Author

ಪಿ. ವೆಂಕೋಬಾಚಾರ್ಯರು ಜನಿಸಿದ್ದು 1905ರಲ್ಲಿ. ಅಜ್ಮೀರ್ ಜನರಲ್ ಅಸ್ಯೂರೆನ್ಸ್ ಸೊಸೈಟಿಯ ಹುಬ್ಬಳ್ಳಿಯ ಶಾಖೆಯ ಪ್ರಧಾನ ವ್ಯವಸ್ಥಾಪಕರಾಗಿದ್ದರು. ವಿಧಿ ತಂದ ವಧು (1946), ಕುಲವಿಲ್ಲದ ಹೆಣ್ಣು(1948) ಹಾಗೂ ವೃಂದ (1949) ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಫ್ರೆಂಚ್ ಕಥಾ ಸಾಹಿತ್ಯ ಸಾಮ್ರಾಟ ಎಂದೇ ಖ್ಯಾತಿಯ ಗಾಯ್ ದ ಮೋಪಾಸನ ಕಥೆಗಳನ್ನು ಅರ್ಪಣ, ಸೈಮನ್ನನ ತಂದೆ, ಗಾಯದ ನೋವು ಹೀಗೆ ವಿವಿಧ ಹೆಸರುಗಳಲ್ಲಿ ಪ್ರಕಟವಾಗಿವೆ. ಇವೆತ್-ಈತನ ಕಾದಂಬರಿ. ಹೂವು ಅರಳಿತು-ತೆಲುಗು ಕಥೆಗಳ ಸಂಕಲನ. ತೆಲುಗು ಹಾಸ್ಯ ಕತೆಗಾರ ಮುನಿ ಮಾಣಿಕ್ಯಂ ನರಸಿಂಹರಾಯರ ಕೃತಿಗಳು ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಇವರ ರುಕ್ಮಿಣಿ ಮತ್ತು ಕಾಂತಂ ಕಥೆಗಳು ಪ್ರಕಟವಾಗಿವೆ.

ಪಿ. ವೆಂಕೋಬಾಚಾರ್ಯ