About the Author

ಪರಶುರಾಮ್ ದ್ಯಾಮಣ್ಣನವರ್ ಹುಟ್ಟಿದ್ದು ಜೂನ್ 08 1986 ರಲ್ಲಿ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದ  ಬೇವಿನಹಳ್ಳಿ ದ್ಯಾಮಪ್ಪ ಮತ್ತು ಸುಶೀಲಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರ ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ ನಂತರ ಪದವಿ ಶಿಕ್ಷಣ ಶ್ರೀ ಮೃತ್ಯುಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿಯಲ್ಲಿ ಪೂರೈಸಿ ಎಂ ಎ ಕನ್ನಡ ಪದವಿಯನ್ನು ಮೈಸೂರು ವಿ ವಿ ಯಲ್ಲಿ ಪೂರೈಸಿ ನಂತರ ಎಸ್ ಎಲ್ ಇ ಟಿ ಹಾಗೂ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಮತಿಯ ಕನ್ನಡ ವಿಭಾಗದಲ್ಲಿ ಕನ್ನಡ ಬೋಧಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಗ್ಗದೊಲವು ಕವಿತಾ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿರುವ ಶ್ರೀಯುತರು ಅನೇಕ ಕವಿತೆಗಳ ಸ್ಪರ್ಧೆಯಲ್ಲಿ ಭಾಗವಹಿಸಿ ಕೊಡಗು ಕ ಸಾ ಪ ದಿಂದ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಕವನಗಳ ತೊಟ್ಟಿಲು ಬಳಗದಿಂದ 2021 ರ ವರ್ಷದ ಕವಿ ಪ್ರಶಸ್ತಿ ಹಾಗೂ 2022ರ ಅತ್ಯುತ್ತಮ ಕವಿ ಪ್ರಶಸ್ತಿ ಪಡೆದಿದ್ದಾರೆ

ಪರಶುರಾಮ್ ದ್ಯಾಮಣ್ಣನವರ್

(08 Jun 1986)