About the Author

ಕವಿ, ಸಾಹಿತಿ, ಕತೆಗಾರ ಪ್ರಹ್ಲಾದ ಅಗಸನಕಟ್ಟೆ ಅವರು ಜನಿಸಿದ್ದು 1956 ಜೂನ್ 3ರಂದು ದಾವಣಗೆರೆಯ ಅಗಸನಕಟ್ಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಉಪನ್ಯಾಸಕರಾಗಿ ಹಾಗೂ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 

ಇವರ ಪ್ರಮುಖ ಕೃತಿಗಳೆಂದರೆ ನನ್ನ ದಣಿಗೆ ನನ್ನ ದನಿ, ಗಲ್ಲುಗಳಲ್ಲಿ ಗುಲಾಬಿ, ಸಂತೆ ಮುಗಿಯುವ ಸಮಯ, ದೀಪವಾರಿದ ಮೇಲೆ, ಸಾವಿನೊಳಗಿನ , ದೇವರ ಸವಾಲ್, ಪ್ರಕುಬ್ದ ಅಲೆಗಳು, ಬಂದೀಖಾನೆ, ಅವಾಂತರ, ಎದುರು ಬದುರು, ಕುತೂಹಲ, ಮುಂತಾದವು. ಇವರ ಮನದ ಮುಂದಣ ಮಾಯೆ' ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೦೬ನೇ ಸಾಲಿನ ಸಣ್ಣಕತೆ ಪ್ರಕಾರದಲ್ಲಿ ಪುಸ್ತಕ ಬಹುಮಾನ ಹಾಗೂ ಇತರೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಪ್ರಹ್ಲಾದ ಅಗಸನಕಟ್ಟೆ

(03 Jun 1956-06 Sep 2016)

Books by Author